ಬೆಂಗಳೂರು: ಕೇರಳದ ಹೇಮಾ ಕಮಿಟಿ (Hema Committee) ಮೂಲಕ ದಾಖಲಾಗಿದ್ದ ಕೇಸ್ ಬೆಂಗಳೂರಿಗೆ (Bengaluru) ವರ್ಗಾವಣೆಯಾಗಿದೆ.
2012ರಲ್ಲಿ ಆರೋಪಿ ರಂಜಿತ್‌ನಿಂದ ಯುವಕನ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಕೇಸ್ ಇದೀಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ (Kempegowda International Airport) ವರ್ಗಾವಣೆಯಾಗಿದೆ.ಇದನ್ನೂ ಓದಿ: ಮೋದಿ ಪ್ರಭಾವ ಬಳಸಿ ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಬಹುದು: ಝೆಲೆನ್ಸ್ಕಿ
2012ರಲ್ಲಿ ಬೆಂಗಳೂರಿನಲ್ಲಿ ಬಾವುತ್ತಿಯುದೆ ನಮತ್ತಿಲ್ ಎಂಬ ಮಮ್ಮುಟಿ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಸಿನಿಮಾದಲ್ಲಿ ರಂಜಿತ್ ಎಂಬುವವರು ಕೆಲಸ ಮಾಡುತ್ತಿದ್ದರು. ರಂಜಿತ್‌ಗೆ ಯುವಕನೊಬ್ಬ ಪರಿಚಯವಾಗಿದ್ದ. ಸಿನಿಮಾದಲ್ಲಿ ಅವಕಾಶಕೊಡಿಸುವುದಾಗಿ ಕೇಳಿ ನಂಬರ್ ಕೂಡ ಪಡೆದುಕೊಂಡಿದ್ದ.
ಬಳಿಕ ಒಂದು ದಿನ ಕರೆ ಮಾಡಿ, ಬೆಂಗಳೂರು ಏರ್‌ಪೋರ್ಟ್ ಬಳಿಯ ತಾಜ್ ಹೋಟೆಲ್‌ಗೆ ಬರಲು ತಿಳಿಸಿದ್ದ. ಹೋಟೆಲ್‌ಗೆ ಕರೆಸಿ ಯುವಕನ ಮೇಲೆ ಆರೋಪಿ ರಂಜಿತ್ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಬಗ್ಗೆ ದೂರುದಾರ ಹೇಮಾ ಕಮಿಟಿ ಮುಂದೆ ಹೇಳಿದ್ದ. ಇದಕ್ಕೆ ಸಂಬಂಧಿಸಿದಂತೆ ಕೇರಳದ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ಯ ಈ ಪ್ರಕರಣ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು, ಐಪಿಸಿ ಸೆಕ್ಷನ್ 377 ಮತ್ತು ಐಟಿ ಕಾಯ್ದೆ 66 ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಭಾರತ- ಪಾಕಿಸ್ತಾನ ನಡುವಿನ ಕರ್ತಾರ್‌ಪುರ ಕಾರಿಡಾರ್ ಒಪ್ಪಂದ 5 ವರ್ಷ ವಿಸ್ತರಣೆ; ಒಪ್ಪಂದ ಯಾಕೆ?