ಬಿಜೆಪಿಯವರ ದುಡ್ಡಿನ ದುರಾಸೆಯಿಂದ ಕರ್ನಾಟಕದಲ್ಲಿ ಹತ್ಯಾಕಾಂಡ ನಡೆದಿದೆ: ಪ್ರಿಯಾಂಕ್‌ ಖರ್ಗೆ ಬಾಂಬ್‌

Public TV
2 Min Read
PRIYANK KHARGE

ಬೆಂಗಳೂರು: ಬಿಜೆಪಿಯವರು ಹೆಣದ ಮೇಲೆ ಹಣ ಮಾಡೋದನ್ನ ಆದ್ಯತೆ ಮಾಡಿಕೊಂಡಿದ್ದರು. 4.26 ಲಕ್ಷ ಜನ ಸತ್ತಿದ್ದಾರಲ್ಲ ಇದಕ್ಕೆ ಯಾರು ಜವಾಬ್ದಾರಿ? ನನ್ನ ಪ್ರಕಾರ ಇದು ಹತ್ಯಾಕಾಂಡ, ಬಿಜೆಪಿಯವರ ದುಡ್ಡಿನ ದುರಾಸೆಯಿಂದ ಹತ್ಯಾಕಾಂಡ ನಡೆದಿದೆ. ಇದು ನಾನು ಹೇಳುತ್ತಿರುವುದಲ್ಲ. ಕೇಂದ್ರ ಸರ್ಕಾರದ ಅಂಕಿ ಅಂಶ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಬಾಂಬ್‌ ಸಿಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವರದಿಯನ್ನ ನಾನು ಅಧ್ಯಯನ ಮಾಡಿದ್ದೇನೆ. ಕುನ್ಹಾ ವರದಿ ಪ್ರಕಾರ, ಯಡಿಯೂರಪ್ಪ, ಶ್ರೀರಾಮುಲು ಯಾವ ರೀತಿ ಹೆಣದ ಮೇಲೆ ಹಣ ಮಾಡಿದ್ದಾರೆ ಅನ್ನೋದನ್ನ ಹೇಳುತ್ತವೆ. 2020ರಲ್ಲಿ 416.48 ಕೋಟಿ ರೂ. ಮೌಲ್ಯದ ಔಷಧಿ, ವೈದ್ಯಕೀಯ ಸಲಕರಣೆಗಳ ಖರೀದಿ, 12 ಲಕ್ಷ ಪಿಪಿಇ ಕಿಟ್‌ಗಳನ್ನು ಒಂದು ರೇಟ್ ಫಿಕ್ಸ್ ಮಾಡಿರುತ್ತಾರೆ. ಚೀನಾದ ಎರಡು ಕಂಪನಿಗಳಿವೆ. ಅವರಿಂದ ವೈದ್ಯಕೀಯ ಸಲಕರಣೆಗಳನ್ನು ಖರೀದಿ ಮಾಡಿದ್ದಾರೆ. ಚೀನಾದಿಂದ ಏನನ್ನೂ ಖರೀದಿ ಮಾಡಬಾರದು ಎಂದು ಮೋದಿ ಹೇಳಿದ್ದರು. ಮೇಕ್ ಇನ್ ಇಂಡಿಯಾ ಮಾಡಬೇಕು ಎಂದಿದ್ದರು. ಪ್ರಧಾನಿ ಅವರ ಆದೇಶ ಉಲ್ಲಂಘನೆ ಮಾಡಿ ಚೀನಾದಿಂದ ಸಲಕರಣೆಗಳನ್ನ ಖರೀದಿಸಿದ್ದೀರಿ. ಇದು ಒಂದು ರೀತಿ ದೇಶದ್ರೋಹ ಚಟುವಟಿಕೆ ಅಲ್ಲವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್‌ – ಬಿಷ್ಣೋಯ್‌ ಗ್ಯಾಂಗ್‌ ಜೊತೆ ನಂಟು ಸಾಬೀತು!

ಚೀನಾದಿಂದ ಖರೀದಿ ಮಾಡುವ ಅಗತ್ಯ ಏನಿತ್ತು? ಬಿಜೆಪಿ ಅವರ ನಿರ್ಲಕ್ಷ್ಯದಿಂದ ಜನ ಸತ್ತಿರೋದು ಹೊರತು ಕೊರೊನಾದಿಂದ ಜನ ಸತ್ತಿಲ್ಲ ಅನಿಸುತ್ತಿದೆ. ಇದು ಬಿಜೆಪಿಯವರ ಹತ್ಯಾಕಾಂಡ. ಇವರು ಕೊರೊನಾದಿಂದ 37 ಸಾವಿರ ಜನ ಸತ್ತಿದಾರೆ ಎನ್ನುತ್ತಾರೆ. ಆದರೆ ಕೇಂದ್ರ ಸರ್ಕಾರದ ವರದಿಯಲ್ಲಿ ರಾಜ್ಯದಲ್ಲಿ ಕೊರೊನಾದಿಂದ 4.25 ಲಕ್ಷ ಜನ ಸತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚಲುವರಾಯಸ್ವಾಮಿ ಮೇಲೆ ಹಲ್ಲೆ ಆಗಿದ್ಯಾ? ಕುಮಾರಸ್ವಾಮಿ ಆರೋಪ ಅಲ್ಲಗಳೆದ ಕೃಷಿ ಸಚಿವ

ಅಂದಿನ ಬಿಜೆಪಿ ಸರ್ಕಾರ ಕೊರೊನಾ ನಿರ್ವಹಣೆ ಮಾಡೋದನ್ನ ಬಿಟ್ಟು, ಜನರ ಜೀವನ ಉಳಿಸಿದೋದನ್ನ ಬಿಟ್ಟು ಹಣ ಮಾಡಿದೆ. ತಂತ್ರಜ್ಞಾನ ಯುಗದಲ್ಲಿ ಯಾಕೆ ಪ್ರಧಾನಿ ಮೋದಿಯವರು ಅವೈಜ್ಞಾನಿಕ ಭಾವನೆಯನ್ನ ಹಬ್ಬಿಸುತ್ತಿದ್ದರು ಎಂದು ಈಗ ಗೊತ್ತಾಗಿದೆ. ತಾಲಿ ಬಜಾವ್ ದೀಪ್ ಚಲಾವ್ ಇವೆಲ್ಲಾ ಭ್ರಷ್ಟಾಚಾರ, ಹತ್ಯಾಕಾಂಡ ಮುಚ್ಚಿಹಾಕೋದಕ್ಕೆ ಮಾಡುತ್ತಿದ್ದರು. ಎಂದು ಕಾಣದಂತಹ ಪರಿಸ್ಥಿತಿ ಇತ್ತು. ಸರ್ಕಾರವನ್ನು ಜನ ನಂಬಿದ್ದರು. ಔಷಧ, ವ್ಯಾಕ್ಸಿನ್, ಬೆಡ್ ಹಂಚಿಕೆ, ಮಾಸ್ಕ್ ವಿತರಣೆ, ಪಿಪಿಇ ಕಿಟ್ ವಿತರಣೆ ಸರ್ಕಾರ ಮಾಡಿದೆ. ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿದ್ದರು ಎಂದು ರಿಪೋರ್ಟ್‌ನಲ್ಲಿ ಗೊತ್ತಾಗಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: Tumakuru| ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ಕೊಡಿ: ಹೆತ್ತ ತಾಯಿ ಅಳಲು

ಪ್ರಧಾನಿಯವರು 700 ಕೋಟಿ ಹಗರಣ ಆಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ನಮ್ಮ ತೆರಿಗೆ ಬೇಕು, ಸಂಪನ್ಮೂಲ ಬೇಕು ಮತ್ತೆ ಅವಮಾನ ಮಾಡುತ್ತೀರಿ. ಅವರ ಸರ್ಕಾರ ಇದ್ದಾಗ ಏನಾಯ್ತು, ಇದಕ್ಕೆ ಅವರು ಉತ್ತರ ಕೊಡಬೇಕು. ಮೋದಿಯವರು ಕೆಂಪು ಕೋಟೆ ಮೇಲೆ ಭಾಷಣ ಮಾಡುತ್ತಾರೆ. ಆದರೆ ಇಲ್ಲಿ ಬಿಜೆಪಿಯವರೇ ಹಾಳು ಮಾಡುತ್ತಾರೆ. ದೇಶದಲ್ಲಿ ಲೋಕಲ್ ಮಾರ್ಕೆಟ್‌ನಲ್ಲಿ ಪಿಪಿಇ ಕಿಟ್ ಇದ್ರೂ ಕೂಡ ಚೀನಾದಿಂದ ಯಾಕೆ ಖರೀದಿ ಮಾಡಿದ್ದೀರಿ? 333 ರೂಪಾಯಿ ಖರೀದಿಸಬೇಕಾಗಿದ್ದ ಕಿಟ್‌ಗಳನ್ನ 2 ಸಾವಿರ ಕೊಟ್ಟು ಖರೀದಿಸಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಕಾರವಾರ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಟ್ರ್ಯಾಕರ್‌ ಅಳವಡಿಸಿದ ರಣ ಹದ್ದು ಪತ್ತೆ!

Share This Article