ಬೆಂಗಳೂರು: ಡಿಕೆ ಸುರೇಶ್ ತಂಗಿ ಹೆಸರಿನಲ್ಲಿ ಐಶ್ವರ್ಯಗೌಡ (Aishwarya Gowda) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿಗೆ (Vinay Kulkarni) ಉಡುಗೊರೆ ರೂಪದಲ್ಲಿ ಐಶ್ವರ್ಯ ನೀಡಿದ್ದರು ಎನ್ನಲಾದ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಐಶ್ವರ್ಯ ಗೌಡ ಹಾಗೂ ವಿನಯ್ ಕುಲಕರ್ಣಿ ನಡುವೆ ವ್ಯವಹಾರಿಕ ಸಂಬಂಧ ಇದೆ ಎಂಬುದಕ್ಕೆ ಸಾಕ್ಷಿಯಾಗಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಯಾವ ಸ್ವಾಮೀಜಿ, ಗುರೂಜಿಗಳು ಭವಿಷ್ಯ ನುಡಿಯೋದು ಬೇಕಿಲ್ಲ: ಡಿಕೆಶಿ
Advertisement
ಈ ಹಿಂದೆ ಐಶ್ವರ್ಯಗೌಡ ಬಳಿ ಮೂರು ಐಷಾರಾಮಿ ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಐಶ್ವರ್ಯ ಪತಿ ಹರೀಶ್ ಹೆಸರಿನಲ್ಲಿದ್ದ ಆಡಿ, ಬಿಎಂಡಬ್ಲ್ಯೂ ಹಾಗೂ ಫಾರ್ಚುನರ್ ಕಾರುಗಳನ್ನು ಸೀಜ್ ಮಾಡಲಾಗಿತ್ತು. ಇದೀಗ ಮತ್ತೊಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: AK-47, ಐದು 303 ಕೋವಿ, 100ಕ್ಕೂ ಹೆಚ್ಚು ಗುಂಡು – ನಕ್ಸಲರದ್ದು ಎನ್ನಲಾದ ಶಸ್ತ್ರಾಸ್ತ್ರ ಪತ್ತೆ
Advertisement
Advertisement
ಕೆಎ03 ಎನ್‌ಎನ್ 8181 ಸಂಖ್ಯೆಯ 60 ಲಕ್ಷ ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರನ್ನು ಸೀಜ್ ಮಾಡಲಾಗಿದೆ. ವಂಚನೆ ಮಾಡಿದ್ದ ಹಣದಿಂದ ಕಾರು ಖರೀದಿಸಿದ್ದ ಐಶ್ವರ್ಯ ಗೌಡ, ಅದನ್ನು ಗಿಫ್ಟ್ ರೂಪದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ನೀಡಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ಆಕಸ್ಮಿಕವಾಗಿ ಗುಂಡು ತಗುಲಿ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾವು
Advertisement