ಚಿಕ್ಕಬಳ್ಳಾಪುರ: ಕಾರು ಹಳ್ಳಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು, ಕಾರಿನ ಸಮೇತ ಚಾಲಕ ಸುಟ್ಟು ಕರಕಲಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ (Chintamani) ತಾಲೂಕಿನ ಗೊಲಪಲ್ಲಿ ಗ್ರಾಮದಲ್ಲಿ ನಡೆದಿದೆ.
ಇಬ್ರಾಹಿಂ (48) ಮೃತ ದುರ್ದೈವಿ. ಈತ ವ್ಯಾಪಾರ ಮುಗಿಸಿಕೊಂಡು ಒಮಿನಿ ಕಾರಿನಲ್ಲಿ ವಾಪಸ್ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಾರು ಹಳ್ಳಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು, ಕಾರಿನ ಸಮೇತ ಚಾಲಕ ಸುಟ್ಟು ಹೋಗಿದ್ದಾನೆ. ಮೃತ ದೇಹವನ್ನು ಚಿಂತಾಮಣಿ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಗುರು ಆತ್ಮಹತ್ಯೆಗೆ ಅಸಲಿ ಕಾರಣ ಇನ್ನೂ ನಿಗೂಢ – ಮೊಬೈಲ್, ಟ್ಯಾಬ್ FSLಗೆ ಕಳಿಸಲು ತಯಾರಿ
ಕೆಂಚಾರ್ಲಹಳ್ಳಿ (Kencharlahalli) ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಶೀಘ್ರದಲ್ಲೇ ನಡೆಯುತ್ತೆ ವಿದ್ಯಾರ್ಥಿಗಳ ರಾಷ್ಟ್ರೀಯ ಸಮೀಕ್ಷೆ; ಏನಿದು ಸರ್ವೇ – ಹಿಂದಿನ ಸಮೀಕ್ಷೆಗಳಿಗೆ ಇದು ಹೇಗೆ ಭಿನ್ನ?