ಹತ್ಯೆಯಾದ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ಗೆ ಕೆನಡಾ ಸಂಸತ್ತು ಮೌನಾಚರಿಸಿ ಗೌರವ – ಭಾರತ ಕೆಂಡಾಮಂಡಲ!

Public TV
2 Min Read
Canada Parliament Hardeep Singh Nijjar

ನವದೆಹಲಿ: ಕೆನಡಾದ ಸಂಸತ್ತು (Canada Parliament) ಮಂಗಳವಾರ ಹೌಸ್ ಆಫ್ ಕಾಮನ್‌ನಲ್ಲಿ ಒಂದು ನಿಮಿಷ ಮೌನ ಆಚರಿಸುವ ಮೂಲಕ ಹತ್ಯೆಯಾದ ಭಾರತದ ಮೋಸ್ಟ್ ವಾಂಟೆಡ್ ಉಗ್ರ, ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್‌ಗೆ (Hardeep Singh Nijjar) ಗೌರವ ಸಲ್ಲಿಸಿದೆ.

ಖಲಿಸ್ತಾನಿ ಭಯೋತ್ಪಾದಕನಿಗೆ ಕೆನಡಾ ಸಂಸತ್ತು ಗೌರವ ಸಲ್ಲಿಸಿದ್ದಕ್ಕೆ ಭಾರತ (India) ಕೆಂಡಾಮಂಡಲವಾಗಿದೆ. ಈ ಬಗ್ಗೆ ವ್ಯಾಂಕೋವರ್‌ನಲ್ಲಿರುವ ಭಾರತೀಯ ದೂತಾವಾಸವು (Indian Consulate General in Vancouver) ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಏರ್ ಇಂಡಿಯಾ ವಿಮಾನ 182 (ಕನಿಷ್ಕಾ) ಮೇಲೆ ನಡೆದ ಬಾಂಬ್ ದಾಳಿಯನ್ನು ಜಗತ್ತಿಗೆ ನೆನಪಿಸಿದೆ. ಇದನ್ನೂ ಓದಿ: 1,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನಳಂದಾ ವಿವಿ ನೂತನ ಕ್ಯಾಂಪಸ್ – ಮೋದಿಯಿಂದ ಲೋಕಾರ್ಪಣೆ

ಕೆನಡಾ ಹರ್ದೀಪ್ ಸಿಂಗ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರತಿಯಾಗಿ ವ್ಯಾಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ 1985ರಲ್ಲಿ ಏರ್ ಇಂಡಿಯಾ ಕಾನಿಷ್ಕಾ ವಿಮಾನದ ಮೇಲೆ ಖಲಿಸ್ತಾನಿ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ 329 ಜನರನ್ನು ಸ್ಮರಿಸಲು ತೀರ್ಮಾನಿಸಿದೆ. ಭಾನುವಾರ ಸಂಜೆ 6:30ಕ್ಕೆ ಸ್ಟಾನ್ಲಿ ಪಾರ್ಕ್ನ ಸೆಪರ್ಲಿ ಆಟದ ಮೈದಾನದಲ್ಲಿ ಮೌನಾಚರಣೆ ನಡೆಸಲು ಭಾರತ ತೀರ್ಮಾನಿಸಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎಸ್‌ಪಿಪಿ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಪರಮೇಶ್ವರ್

ಭಯೋತ್ಪಾದನೆಯ ಪಿಡುಗನ್ನು ಎದುರಿಸುವಲ್ಲಿ ಭಾರತವು ಮುಂಚೂಣಿಯಲ್ಲಿ ನಿಂತಿದೆ. ಜಾಗತಿಕವಾಗಿ ಉಗ್ರಗಾಮಿಗಳ ಬೆದರಿಕೆಯನ್ನು ನಿಭಾಯಿಸಲು ಎಲ್ಲ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದು ವ್ಯಾಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಬುಧವಾರ ತಿಳಿಸಿದೆ. ಇದನ್ನೂ ಓದಿ: ಕೆಂಡದಂತ ಬಿಸಿಲು, ಬಿಸಿಗಾಳಿ ಹೊಡೆತಕ್ಕೆ ದೆಹಲಿಯಲ್ಲಿ 15 ಮಂದಿ ಸಾವು

ಜೂನ್ 23, 2024 ಏರ್ ಇಂಡಿಯಾ ವಿಮಾನ 182ರ (ಕನಿಷ್ಕಾ) ಮೇಲೆ ಭಯೋತ್ಪಾದಕ ಬಾಂಬ್ ದಾಳಿ ನಡೆದು 39 ವರ್ಷಗಳಾಗುತ್ತವೆ. ಈ  ದಾಳಿಯಲ್ಲಿ 86 ಮಕ್ಕಳು ಸೇರಿದಂತೆ 329 ಮುಗ್ಧ ನಾಗರಿಕರು ಪ್ರಾಣ ಕಳೆದುಕೊಂಡರು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಕೆನಡಾದ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನ್ ಪರ ಉಗ್ರಗಾಮಿಗಳಿಗೆ ಕೆನಡಾ ಯಾವುದೇ ಅಡೆತಡೆಯಿಲ್ಲದೇ ಸ್ಥಳಾವಕಾಶ ನೀಡುತ್ತಿರುವುದು ಉಭಯ ದೇಶಗಳ ನಡುವಿನ ಪ್ರಮುಖ ಸಮಸ್ಯೆಯಾಗಿದೆ ಎಂದು ಭಾರತ ಹೇಳಿದೆ. ನಿಜ್ಜರ್ ಹತ್ಯೆಯ ಕುರಿತು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ತನಿಖೆ ನಡೆಸುತ್ತಿದ್ದು, ನಾಲ್ವರು ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಆರ್ಡರ್‌ ಮಾಡಿದ್ದು ಗೇಮಿಂಗ್‌ ವಸ್ತು, ಆದ್ರೆ ಬಂದಿದ್ದು ವಿಷಕಾರಿ ಹಾವು – ಬಾಕ್ಸ್‌ ಓಪನ್‌ ಮಾಡಿದ ಯುವತಿ ಜಸ್ಟ್‌ ಮಿಸ್‌!

Share This Article