ನವದೆಹಲಿ: ಅಮೇಥಿಯ (Amethi) ಜನರು ನನ್ನ ಸ್ಪರ್ಧೆ ಬಯಸಿದ್ದಾರೆ ಎಂದು ಹೇಳಿದ್ದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ, ಕೈಗಾರಿಕೋದ್ಯಮಿ ರಾಬರ್ಟ್ ವಾದ್ರಾ (Robert Vadra) ಈಗ ನಾನು ಸಕ್ರಿಯ ರಾಜಕಾರಣಕ್ಕೆ (Politics) ಬರಬೇಕೆಂಬುದು ದೇಶದ ಕರೆಯಾಗಿದೆ ಎಂದು ಹೇಳಿದ್ದಾರೆ.
ಋಷಿಕೇಶ್ ತ್ರಿವೇಣಿ ಘಾಟ್‌ನಲ್ಲಿ ಗಂಗಾ ಆರತಿಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಮಾಡುತ್ತಿರುವ ರಾಜಕೀಯ ತಪ್ಪು, ಧರ್ಮ ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿ ಇಡಬೇಕು. ಬಿಜೆಪಿ (BJP) ಆಡಳಿತದಲ್ಲಿ ಸಾಮಾನ್ಯ ನಾಗರಿಕರ ನೈಜ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ಜನರಲ್ಲಿ ಭಯವನ್ನು ಹರಡುವುದು ಬಿಜೆಪಿಯ ಆಡಳಿತದ ವಿಧಾನವಾಗಿದೆ. ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿ ನಂತರ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಮೊದಲ ಹಂತದ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವರದಿ ಬಂದಿದೆ: ಸಿದ್ದರಾಮಯ್ಯ
Advertisement
Advertisement
ಅಮೇಥಿಯಿಂದ ಚುನಾವಣೆಗೆ (Lok Sabha Election) ಸ್ಪರ್ಧಿಸುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಬರ್ಟ್ ವಾದ್ರಾ, ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕು ಎಂಬುದು ಇಡೀ ದೇಶದ ಕರೆಯಾಗಿದೆ. ನಾನು ಯಾವಾಗಲೂ ದೇಶದ ಜನರಿಗಾಗಿ ಹೋರಾಡುತ್ತೇನೆ. ನಾನು ಜನರ ನಡುವೆ ಬದುಕುತ್ತೇನೆ. ಸಮಾಜಕ್ಕಾಗಿ ದುಡಿಯುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಅಧಿನಾಯಕಿಯಿಂದ್ಲೇ ಏನೂ ಮಾಡೋಕೆ ಆಗಲಿಲ್ಲ- ತಂಗಡಗಿಗೆ ರೆಡ್ಡಿ ಟಾಂಗ್
Advertisement