ತುಮಕೂರು: ನಾಯಿಯ ಮೊಲೆ ಹಾಲು ಇದ್ದರೇನು ಎಂದು ಹೀಗಳೆಯುವವರ ಮಾತಿಗೆ ಉತ್ತರ ಎನ್ನುವಂತೆ ನಾಯಿಯೇ ಕರುವಿಗೆ ಹಾಲು ಕುಡಿಸುವ ಅಪರೂಪದ ಸನ್ನಿವೇಶ ನೋಡಿದ್ದೀರಾ?
ಹೌದು.. ಕರುವೊಂದು ನಾಯಿಯ ಕೆಚ್ಚಲಿಗೆ ಬಾಯಿಟ್ಟು ಹಾಲು ಕುಡಿದಿರುವ ಅಚ್ಚರಿಯ ಘಟನೆಯೊಂದು ತುಮಕೂರಿನಲ್ಲಿ ಕಂಡುಬಂದಿದೆ. ಇಲ್ಲಿನ ಕುಂದೂರಿನಲ್ಲಿ ಅಪರೂಪದ ಸನ್ನಿವೇಶ ಕಂಡುಬಂದಿದ್ದು ಗ್ರಾಮಸ್ಥರಲ್ಲೂ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಬಂಧಿತ ಐಎಎಸ್ ಅಧಿಕಾರಿ ಜೊತೆಗಿದ್ದ ಅಮಿತ್ ಶಾ ಫೋಟೊ ಶೇರ್ – ನಿರ್ದೇಶಕನ ವಿರುದ್ಧ ಪ್ರಕರಣ ದಾಖಲು
ಈ ನಾಯಿ ಹಾಗೂ ಕರು ಕುಂದೂರಿನ ಬಸವರಾಜ-ಗೀತಾ ದಂಪತಿಯ ಸಾಕು ಪ್ರಾಣಿಗಳು. ನಾಯಿಯ ಕೆಚ್ಚಲಿಗೆ ಕರು ಬಾಯಿಟ್ಟು ಹಾಲು ಕುಡಿಯುತ್ತಿದ್ದಂತೆ, ನಾಯಿ ಕರುವಿನ ಮೈ ಸವರಿ ತಾಯಿ ವಾತ್ಸಲ್ಯ ತೋರಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.