ಅಮರಾವತಿ: ಆಂಧ್ರಪ್ರದೇಶದ ಕರಾವಳಿ ಭಾಗದ ಕೋನಸೀಮಾ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಆವರಿಸಿದೆ. ಸಂಪೂರ್ಣ ನೀರು ತುಂಬಿಕೊಂಡಿದ್ದು ಕೆಲ ಕಡೆ ರಸ್ತೆಗಳೇ ಕಾಣದಂತಾಗಿದೆ. ಹೊಲ-ಗದ್ದೆ, ತೋಟಗಳೂ ಜಲಾವೃತವಾಗಿವೆ. ಈ ನಡುವೆಯೂ ವಧು ಮದುವೆಯಾಗಲು ತನ್ನ ಕುಟುಂಬದೊಂದಿಗೆ ದೋಣಿಯಲ್ಲಿ ವರನ ಮನೆಗೆ ತೆರಳಿದ್ದಾರೆ.
https://mobile.twitter.com/umasudhir/status/1547814747512647680?ref_src=twsrc%5Etfw%7Ctwcamp%5Etweetembed%7Ctwterm%5E1547814747512647680%7Ctwgr%5E%7Ctwcon%5Es1_&ref_url=http%3A%2F%2Fapi-news.dailyhunt.in%2F
Advertisement
ಆಂಧ್ರಪ್ರದೇಶದ ಅಶೋಕ್ ಮತ್ತು ಪ್ರಶಾಂತಿ ಎಂಬ ಜೋಡಿ ಕಳೆದ ಆಗಸ್ಟ್ನಲ್ಲಿ ಮದುವೆಯಾಗಬೇಕಿತ್ತು. ಆದರೆ ಅವರು ಇದೇ ಜುಲೈನಲ್ಲಿ ಮದುವೆಯಾಗಲು ಬಯಸಿದ್ದರು. ಇದಕ್ಕೆ ಕುಟುಂಬಸ್ಥರೂ ಒಪ್ಪಿಗೆ ನೀಡಿ ಮದುವೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಕನ್ನಡದಲ್ಲೂ ನಟಿಸಿರುವ ಈ ನಟಿ ಮಕ್ಕಳ ಚಿಕಿತ್ಸೆಗೆ 67 ಲಕ್ಷ ದಾನ
Advertisement
Advertisement
ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಲವು ಪ್ರದೇಶಗಳು ಜಲಾವೃತವಾಗಿವೆ. ಆದರೂ ವಧು ಪ್ರಶಾಂತಿ ಕುಟುಂಬ ಮತ್ತು ಸಂಬಂಧಿಕರು ಸಕಲ ಸಿದ್ಧತೆಯೊಂದಿಗೆ ವರ ಅಶೋಕ್ ಮನೆಗೆ ದೋಣಿಯಲ್ಲಿ ಹೊರಟಿದ್ದಾರೆ.