`ಬ್ರಹ್ಮಗಂಟು’ ಧಾರಾವಾಹಿ (Brahmagantu Serial) ನಟಿ ಗೀತಾ ಭಾರತಿ ಭಟ್ (Geetha Bharathi Bhat) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬ್ರಹ್ಮಾವರ ರಾಜಾರಾಮ್ ಭಟ್ ಎಂಬುವರ ಜೊತೆ ಗೀತಾ ಭಾರತಿಯವರ ಕಲ್ಯಾಣ ನಡೆದಿದೆ. ಕಿರುತೆರೆಯಲ್ಲಿ ಮೋಡಿ ಮಾಡಿರುವ ಕಲಾವಿದೆ ಗೀತಭಾರತಿ ಭಟ್ ಬಹುಮುಖ ಪ್ರತಿಭೆ. ಬಿಗ್‌ಬಾಸ್ ಸೀಸನ್ 8ರ ಸ್ಪರ್ಧಿಯೂ ಆಗಿದ್ದ ಗೀತಾ ಭಾರತಿ ಭಟ್ ಕನ್ನಡದ ಅನೇಕ ಧಾರಾವಾಹಿಯಲ್ಲಿ ನಟಿಸಿದ್ದು ಇದೀಗ ದಿಢೀರ್ ಮದುವೆಯಾಗಿದ್ದಾರೆ.
ಅಂದಹಾಗೆ ಗೀತಾ ಭಾರತಿ ಭಟ್ `ಅಂಬಿನಿಂಗ್ ವಯಸ್ಸಾಯ್ತೋ’ ಸಿನಿಮಾ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಪೋಷಕ ಪಾತ್ರದಲ್ಲಿ ಕಾಣಿಸ್ಕೊಂಡಿದ್ದರು. ಆದರೆ ಸಿನಿಮಾಗಳಿಗಿಂತ ಕಿರುತೆರೆಯಲ್ಲೇ ಗೀತಾ ಭಾರತಿ ಭಟ್ ಹೆಚ್ಚು ಜನಪ್ರಿಯರು. ನಟಿಯಾಗಿ, ರಂಗಭೂಮಿ ಕಲಾವಿದೆಯಾಗಿ. ಗಾಯಕಿಯೂ ಆಗಿರುವ ಗೀತಾ ಭಾರತಿ ಭಟ್ ಹಿಂದೆ ಬಾಡಿ ಶೇಮಿಂಗ್ ಅನುಭವಿಸಿದ್ದರು.
ಸಂಪ್ರದಾಯಸ್ಥ ಮಧ್ಯಮ ಕುಟುಂಬದಲ್ಲಿ ಬೆಳೆದ ಗೀತಾ ಭಾರತಿ ಭಟ್ ಅಭಿನಯದಲ್ಲಿ ಚತುರೆ. ಇದೀಗ ಗೀತಾ ಭಾರತಿ ಭಟ್ ಮದುವೆಗೆ ಅವರ ಸೀರಿಯಲ್ ಬಳಗದ ಆಪ್ತವರ್ಗ ಸಾಕ್ಷಿಯಾಗಿತ್ತು. ಮದುವೆಯ ಬಳಿಕವೂ ಗೀತಾ ಭಾರತಿ ಭಟ್ ಸಿನಿಮಾ, ಸೀರಿಯಲ್ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ.



