ಅಂತರ್ಜಾತಿ ಪ್ರೇಮ ವಿವಾಹವಾಗಿದ್ದಕ್ಕೆ ಯುವಕನ ಕಡೆಯವರ ಆಟೋಗೆ ಬೆಂಕಿ ಹಚ್ಚಿದ ಹುಡುಗಿ ಕಡೆಯವರು

Public TV
1 Min Read
Chikkaballapur Auto Fire

ಚಿಕ್ಕಬಳ್ಳಾಪುರ: ಒಂದೇ ಗ್ರಾಮದಲ್ಲಿ ಅಂತರ್ಜಾತಿಯ ಯುವಕ ಮತ್ತು ಯುವತಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಕ್ಕೆ (Intercaste Marriage) ರೊಚ್ಚಿಗೆದ್ದ ಯುವತಿ ಕಡೆಯವರು ಯುವಕನ ಸಂಬಂಧಿಕರ ಆಟೋಗೆ (Auto) ಬೆಂಕಿ (Fire) ಹಚ್ಚಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮೇಲಿನ ಅಪ್ಪಿರೆಡ್ಡಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸುರೇಶ್ ಕುಮಾರ್ ಹಾಗೂ ಮೊನಿಕಾ ಪ್ರೀತಿಸಿ ಪರಾರಿಯಾಗಿ ಮದುವೆಯಾಗಿದ್ದರು. ಸುರೇಶ್ ಕುಮಾರ್ ಕಂಬಿ ಕೆಲಸ ಮಾಡುತ್ತಿದ್ದು, ಮೊನಿಕಾ ಪಿಯುಸಿ ಫೈಲ್ ಆಗಿ ಮನೆಯಲ್ಲೇ ಇದ್ದಳು. ಇದನ್ನೂ ಓದಿ: ಆಂಗ್ಲ ಭಾಷೆಯಲ್ಲಿದ್ದ ಜಾಹೀರಾತು ಫಲಕ ಹರಿದು ಆಕ್ರೋಶ; 50 ಕರವೇ ಕಾರ್ಯಕರ್ತರ ಬಂಧನ

ಎದುರು ಬದುರು ಮನೆಯಲ್ಲಿದ್ದ ಸುರೇಶ್ ಹಾಗೂ ಮೊನಿಕಾ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ಈ ಹಿನ್ನೆಲೆ ಸುರೇಶ್ ಹಾಗೂ ಮೋನಿಕಾ ಹಿರಿಯರ ಒಪ್ಪಿಗೆಯಿಲ್ಲದೇ ಓಡಿಹೋಗಿ ಮದುವೆಯಾಗಿದ್ದರು. ಇದರಿಂದ ರೊಚ್ಚಿಗೆದ್ದ ಹುಡುಗಿಯ ಪೋಷರು ಹುಡುಗನ ಸಂಬಂಧಿಕರಾದ ಮೋಹನ್ ಎಂಬುವವರಿಗೆ ಸೇರಿದ ಆಟೋಗೆ ಬೆಂಕಿ ಹಚ್ಚಿರುವುದಾಗಿ ಆರೋಪಿಸಲಾಗಿದೆ. ಇದನ್ನೂ ಓದಿ: ಮತದಾನ ಮಾಡಲು ಮೈಸೂರಿನಿಂದ ಹೊರಟ ರಾಮ್ ಚರಣ್

Share This Article