ಮಂಗಳೂರು: ಇಲ್ಲಿನ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ರಾಜಸ್ಥಾನದ ಉದಯಪುರದಲ್ಲಿ ಬೋಧನಾ ಸಿಬ್ಬಂದಿ ಆಗಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಡೆಸಿರುವುದು ವಂಚನೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಸದಸ್ಯನಾಗಲು ಡಾ.ಭರತ್ ಶೆಟ್ಟಿ ರಾಜಸ್ಥಾನದ ಉದಯಪುರದ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ಕೂಡ ಬೋಧನಾ ಸಿಬ್ಬಂದಿ ಆಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ, ನ್ಯಾಯವಾದಿ ಎ.ಸಿ ವಿನಯರಾಜ್ ಆಪಾದಿಸಿದ್ದಾರೆ.
Advertisement
ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಾವಳಿಗಳ ಪ್ರಕಾರ, ಒಬ್ಬ ವ್ಯಕ್ತಿ ಒಂದು ಕಾಲೇಜಿನಲ್ಲಿ ಪೂರ್ಣಕಾಲಿಕ ಬೋಧನೆ ಮಾಡುವುದಿದ್ದಲ್ಲಿ ಇನ್ನೊಂದು ಕಾಲೇಜಿನಲ್ಲಿ ಬೋಧಕ ಸಿಬ್ಬಂದಿಯಾಗಿ ಕೆಲಸ ಮಾಡಲು ಅವಕಾಶವಿರುವುದಿಲ್ಲ. ಆದ್ರೆ ಡಾ. ಭರತ್ ಶೆಟ್ಟಿಯವರು ಮಂಗಳೂರು ನಗರದ ಎ.ಜೆ ಡೆಂಟಲ್ ಕಾಲೇಜಿನ ಪ್ರೊಫೆಸರ್ ಮತ್ತು ಪ್ರಾಂಶುಪಾಲರಾಗಿದ್ದಾರೆ.
Advertisement
Advertisement
ರಾಜಸ್ಥಾನದ ಉದಯಪುರ್‍ನಲ್ಲಿರುವ ಫೆಸಿಪಿಕ್ ಅಕಾಡೆಮಿಕ್ ಆಫ್ ಹಯರ್ ಎಜುಕೇಶನ್ ಆಂಡ್ ರಿಸರ್ಚ್ ಯುನಿವರ್ಸಿಟಿಯಲ್ಲಿ ಕಾನೂನು ಬಾಹಿರವಾಗಿ ಡೆಂಟಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದಾರೆ ಅಂತ ನ್ಯಾಯವಾದಿ ಆರೋಪಿಸಿದ್ದಾರೆ.
Advertisement
ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ (ಡಿಸಿಐ) ಅಧ್ಯಕ್ಷರ ವಿರುದ್ಧ 50 ಕೋಟಿ ರೂ. ಲಂಚ ಹಗರಣದ ಆರೋಪವಿದ್ದು, ಈ ಸಂಬಂಧ ಡಿಸಿಐ ಸದಸ್ಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ಅವರ ಮನೆ ಮೇಲೆ 2013ರಲ್ಲಿ ಐಟಿ ದಾಳಿ ನಡೆದಿತ್ತು.