ಲಕ್ನೋ/ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶಗಳ ಪೈಕಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿದೆ. ಈ ಸೋಲಿಗೆ ಕಾರಣ ಮಾತ್ರ ಆ ಒಂದು ಪಕ್ಷ ಎಂಬ ಸತ್ಯ ಬಯಲಾಗಿದೆ.
Advertisement
ಹೌದು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸಾಧನೆ ನೆಲಕಚ್ಚಿದೆ. ‘ಕೈ’ ಪಡೆ ಹೀನಾಯ ಸೋಲು ಕಂಡು ಮುಖಭಂಗ ಅನುಭವಿಸಿದೆ. ‘ಕೈ’ ಪಡೆಯ ಅತಿದೊಡ್ಡ ಸೋಲಿಗೆ ಕಾರಣ ಇದೀಗ ರಿವೀಲ್ ಆಗಿದ್ದು, AIMIM ಪಕ್ಷ ಗೆಲುವಿನ ಅಂಚಿನಲ್ಲಿದ್ದ ಕಾಂಗ್ರೆಸ್‍ಗೆ ಸೋಲಿನ ರುಚಿ ತೋರಿಸಿದೆ. ಕಾಂಗ್ರೆಸ್ ವೋಟ್‍ಗಳನ್ನು ಅಸಾದುದ್ದೀನ್ ಓವೈಸಿಯ AIMIM ಪಕ್ಷ ಕಿತ್ತು ತಿಂದಿದೆ. ಪರಿಣಾಮ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. 2-3 ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲುವನ್ನು ಎಂಐಎಂಐಎಂ ಕಸಿದುಕೊಂಡಿದೆ. 100 ಕ್ಷೇತ್ರಗಳ ಪೈಕಿ ಸುಮಾರು 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ 2-3 ಸಾವಿರ ಮತಗಳ ಅಂತರದಲ್ಲಿ ಸೋಲು ಕಾಣುವಂತಾಗಿದೆ. ಇದನ್ನೂ ಓದಿ: EVMಗಳಲ್ಲಿ ಸಮಸ್ಯೆಯಿಲ್ಲ, ಜನರ ತಲೆಯೊಳಗಿನ ಚಿಪ್ಪಿನಲ್ಲಿ ಸಮಸ್ಯೆಯಿದೆ: ಫಲಿತಾಂಶದ ಬಗ್ಗೆ ಓವೈಸಿ ಪ್ರತಿಕ್ರಿಯೆ
Advertisement
Advertisement
ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಉತ್ತರ ಪ್ರದೇಶದ ಫಲಿತಾಂಶ ಕರ್ನಾಟಕ ಕಾಂಗ್ರೆಸ್‍ಗೂ ಅನ್ವಯವಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಕರ್ನಾಟಕದಲ್ಲಿ ಎರಡು ಪಕ್ಷಗಳು ಕಾಂಗ್ರೆಸ್‍ಗೆ ಕಂಟಕವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಮತಗಳನ್ನು ಒಡೆಯುವ ಶಕ್ತಿ ರಾಜ್ಯದಲ್ಲಿ ಎಸ್‍ಡಿಪಿಐ, ಎಐಎಂಐಎಂ ಪಕ್ಷಗಳಿಗಿದೆ. ಹಾಗಾಗಿ ಬಿಜೆಪಿಗಿಂತಲೂ, ಕಾಂಗ್ರೆಸ್‍ಗೆ ಈ ಎರಡು ಪಕ್ಷಗಳು ಡೇಂಜರ್ ಆಗಿದೆ. ಇದನ್ನೂ ಓದಿ: ಮೂರು ಪ್ರತ್ಯೇಕ ಎನ್‍ಕೌಂಟರ್‌ಗಳಲ್ಲಿ ನಾಲ್ವರು ಉಗ್ರರ ಹತ್ಯೆ
Advertisement
ಈಗಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಎಸ್‍ಡಿಪಿಐ, ಎಐಎಂಐಎಂ ಪಕ್ಷಗಳು ತೀವ್ರ ಸ್ಪರ್ಧೆ ನೀಡುತ್ತಿವೆ. ಎಸ್‍ಡಿಪಿಐ, ಎಐಎಂಐಎಂ ಪಕ್ಷಗಳು ಸಂಘಟನೆ ಗಟ್ಟಿ ಮಾಡಿಕೊಳ್ಳುತ್ತಿವೆ. ಕರಾವಳಿ ಭಾಗದಲ್ಲಿ ಎಸ್‍ಡಿಪಿಐ ಬಲಿಷ್ಠವಾಗುತ್ತಿದ್ದರೆ, ಇತ್ತ ಹೈದರಾಬಾದ್ ಕರ್ನಾಟಕದಲ್ಲಿ ಓವೈಸಿ ಕೋಟೆ ಕಟ್ಟುತ್ತಿದ್ದಾರೆ. ಅದಲ್ಲದೆ ಹಿಜಬ್ ಸೇರಿ ಮುಸ್ಲಿಂ ಧಾರ್ಮಿಕ ವಿಚಾರಗಳಲ್ಲಿ ಎರಡು ಪಕ್ಷಗಳು ಹಸ್ತಕ್ಷೇಪ ಮಾಡುತ್ತಿವೆ. ಸ್ಥಳೀಯ ಸಂಸ್ಥೆಗಳಲ್ಲಿ ಈ ಎರಡು ಪಕ್ಷಗಳು ಪ್ರಾಬಲ್ಯ ಸಾಧಿಸುತ್ತಿವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಮತ ಕಸಿಯುವ ಸಾಧ್ಯತೆ ಇದ್ದು, ಎಚ್ಚೆತ್ತುಕೊಳ್ಳದಿದ್ದರೇ ಕಾಂಗ್ರೆಸ್ ಮತಗಳನ್ನು ಕಿತ್ತು ತಿನ್ನುವುದು ಖಚಿತ.