– ನಂ.1 ಭ್ರಷ್ಟರಾಗಿಯೇ ಪ್ರಾಣ ಬಿಟ್ರು ರಾಜೀವ್ ಗಾಂಧಿ
– ಮೋದಿ ಹೇಳಿಕೆ ‘ಕೈ’ ನಾಯಕರು ಗರಂ
ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ನಂಬರ್ 1 ಭ್ರಷ್ಟರಾಗಿಯೇ ಪ್ರಾಣ ಬಿಟ್ಟರು ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್ ಅಸಮಾಧಾನ ಹೊರ ಹಾಕಿದೆ.
ಟ್ವೀಟ್ ಮೂಲಕ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ ಅವರು, ಮೋದಿ ಜೀ, ಯುದ್ಧ ಮುಕ್ತಾಯವಾಗಿದೆ. ನಿಮ್ಮ ಕರ್ಮ ನಿಮಗಾಗಿ ಕಾಯುತ್ತಿದೆ. ನೀವು ಏನು ಎಂಬುದನ್ನು ನಿಮ್ಮ ಅಂತರಾಳವೇ ಹೇಳುತ್ತಿದೆ. ನಮ್ಮ ತಂದೆ ರಾಜೀವ್ ಗಾಂಧಿ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದ ಅವರು, ಕೊನೆಗೆ ಪ್ರತಿ ಮತ್ತು ಅಪ್ಪುಗೆಯೊಂದಿಗೆ, ರಾಹುಲ್ ಎಂದು ಕುಟುಕಿದ್ದಾರೆ.
Advertisement
Modi Ji,
The battle is over. Your Karma awaits you. Projecting your inner beliefs about yourself onto my father won’t protect you.
All my love and a huge hug.
Rahul
— Rahul Gandhi (@RahulGandhi) May 5, 2019
Advertisement
ಉತ್ತರ ಪ್ರದೇಶ ಪೂರ್ವದ ಕಾಂಗ್ರೆಸ್ ಪ್ರಧಾನಿ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಅವರು ಕೂಡ ಟ್ವೀಟ್ ಮೂಲಕ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ವೀರ ಮರಣ ಹೊಂದಿದವರ ಹೆಸರು ಹೇಳಿ ಮತ ಕೇಳುವ ಮೋದಿ ಅವರು, ಹುತಾತ್ಮರಾದ ಮತ್ತೊಬ್ಬ ಮೇರು ವ್ಯಕ್ತಿಯ ಬಗ್ಗೆ ಅವಹೇಳನಕಾರಿ ಮಾತುಗಳನ್ನ ಆಡಿದ್ದಾರೆ. ಅಮೇಥಿ ಲೋಕಸಭಾ ಕ್ಷೇತ್ರದ ಜನ ಇದಕ್ಕೆ ಸೂಕ್ತ ಉತ್ತರ ಕೊಡುತ್ತಾರೆ. ಈ ಕ್ಷೇತ್ರದ ಜನರಿಗಾಗಿ ರಾಜೀವ್ ಗಾಂಧಿ ಪ್ರಾಣ ನೀಡಿದರು. ಮೋದಿ ಅವರೇ ನಿಮಗೆ ನೆನಪಿರಲಿ ದೇಶದ ಜನರು ವಂಚನೆಯನ್ನು ಸಹಿಸುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
Advertisement
शहीदों के नाम पर वोट माँगकर उनकी शहादत को अपमानित करने वाले प्रधानमंत्री ने कल अपनी बेलगाम सनक में एक नेक और पाक इंसान की शहादत का निरादर किया। जवाब अमेठी की जनता देगी जिनके लिए राजीव गांधी ने अपनी जान दी। हाँ मोदीजी ‘यह देश धोकेबाज़ी को कभी माफ नहीं करता’।
— Priyanka Gandhi Vadra (@priyankagandhi) May 5, 2019
Advertisement
ಮೋದಿ ಅವರು ಮೃತ ವ್ಯಕ್ತಿಗೆ ಅವಮಾನ ಮಾಡುವ ಮೂಲಕ ಪ್ರಾಮಾಣಿಕತೆ ಮತ್ತು ಸಭ್ಯತೆಯ ಮೀರಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಹೇಳಿದ್ದೇನು?:
ಉತ್ತರ ಪ್ರದೇಶದಲ್ಲಿ ಶನಿವಾರ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ನಿಮ್ಮ ತಂದೆ ನಂ. 1 ಭ್ರಷ್ಟರಾಗಿಯೇ ಪ್ರಾಣ ಬಿಟ್ಟರು ಎಂದು ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದರು.
ನನ್ನ ಚಾರಿತ್ರ್ಯವಧೆ ಮಾಡಲು ಪ್ರತಿಪಕ್ಷಗಳು ಒಂದಾಗಿವೆ. ನನ್ನನ್ನು ಸಣ್ಣವನಾಗಿ ಮಾಡುವ ಮೂಲಕ ದೇಶದಲ್ಲಿ ಅಸ್ತಿರ ಸರ್ಕಾರವನ್ನು ರಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್, ಟಿಎಂಸಿ, ಎಸ್‍ಪಿ, ಬಿಎಸ್‍ಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
Does Mr Modi know that a BJP government decided not to file an appeal to the SC against the HC judgment?
— P. Chidambaram (@PChidambaram_IN) May 5, 2019