ಬೆಂಗಳೂರು: ಗಮನ ಬೇರೆಡೆಗೆ ಸೆಳೆದು ಗರ್ಭಿಣಿಯ ಪರ್ಸನ್ನು ಕದ್ದು ಅದರಲ್ಲಿದ್ದ ಡೆಬಿಟ್ ಕಾರ್ಡ್‍ನ ಸಂಪೂರ್ಣ ಹಣ ದೋಚಿದ ಘಟನೆ ಕಳೆದ ಕೆಆರ್ ಪುರಂನಲ್ಲಿ ನಡೆದಿದೆ.
ಬುಧವಾರ ಸೆಪ್ಟಂಬರ್ 6ರಂದು ಲಕ್ಷ್ಮಿ ಪ್ರಿಯಾ ಎಂಬವರು ಬಸ್ ನಲ್ಲಿ ಸಂಜೆ 6 ಗಂಟೆಗೆ ಭಟರಹಳ್ಳಿಯಿಂದ ಕೆಆರ್‍ಪುರಂಗೆ ತೆರಳುತಿದ್ದರು. ಈ ವೇಳೆ ಮಹಿಳೆಯೊಬ್ಬಳು ಲಕ್ಷ್ಮಿ ಅವರನ್ನು ಪರಿಚಯ ಮಾಡಿಕೊಂಡು ಮಾತನಾಡಲು ಆರಂಭಿಸಿದ್ದಾಳೆ.
ನಂತರ ಮಾತಿನ ನಡುವೆಯೇ ಲಕ್ಷ್ಮೀಪ್ರಿಯಾ ಅವರು ಎಡಗೈನಲ್ಲಿ ಹಾಕಿಕೊಂಡಿದ್ದ ಬ್ಯಾಗ್ ಪರ್ಸ್ ಕಳ್ಳತನ ಮಾಡಿ ಮುಂದಿನ ನಿಲ್ದಾಣ ಟಿಸಿ ಪಾಳ್ಯದಲ್ಲಿ ಇಳಿದುಕೊಂಡಿದ್ದಾಳೆ. ನಂತರ ಭಟ್ಟರಹಳ್ಳಿ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂನಿಂದ 40 ಸಾವಿರ ಹಣವನ್ನು ಡ್ರಾ ಮಾಡಿದ್ದಳು.
ಬಸ್ಸಿನಿಂದ ಇಳಿಯಬೇಕಾದರೆ ಲಕ್ಷ್ಮೀ ಪ್ರಿಯಾಗೆ ಬ್ಯಾಗ್ ನಾಪತ್ತೆಯಾಗಿರುವ ವಿಚಾರ ತಿಳಿದಿದೆ. ನಂತರ ಕಾರ್ಡ್ ಬ್ಲಾಕ್ ಮಾಡಿಸಲು ಬ್ಯಾಂಕಿಗೆ ತೆರೆಳಿದ್ದಾಗ ಹಣ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ.
ಹಣ ಡ್ರಾ ಮಾಡಿದ ಎಟಿಎಮ್‍ನ ಸಿಸಿಟಿವಿಯಲ್ಲಿ ಮಹಿಳೆಯ ಕೃತ್ಯ ಸೆರೆಯಾಗಿದ್ದು ಸಿಸಿಟಿವಿ ಆಧರಿಸಿ ಲಕ್ಷ್ಮಿ ಪ್ರಿಯಾ ಅವರು ದೂರನ್ನು ನೀಡಿದ್ದು ಈ ಸಂಬಂಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೆಲಿವರಿಗೆಂದು ಲಕ್ಷ್ಮೀ ಹಣವನ್ನು ಕೂಡಿಟ್ಟಿದ್ದರು.