ಬೆಂಗಳೂರು: ರಾಜ್ಯದ ಅತ್ಯಂತ ವಿಶ್ವಾಸಾರ್ಹ ಕನ್ನಡ ನ್ಯೂಸ್ ಚಾನೆಲ್ ನಿಮ್ಮ ಪಬ್ಲಿಕ್ ಟಿವಿ(PUBLiC TV). ಪಬ್ಲಿಕ್ ಟಿವಿ ಅಂದರೆ ಜನರ ನಂಬಿಕೆ, ವಿಶ್ವಾಸ. ಇದೇ ಪಬ್ಲಿಕ್ ಟಿವಿ ಮೂಲಕ ನಿಷ್ಠಾವಂತ ಆಟೋ ಚಾಲಕರೊಬ್ಬರು ಮಹತ್ವದ ದಾಖಲೆ ಕಳೆದುಕೊಂಡಿದ್ದ ಮಹಿಳೆಗೆ ಬ್ಯಾಗ್ ಅನ್ನು ಹಿಂದಿರುಗಿಸಿದ್ದಾರೆ.
Advertisement
ಒಡಿಶಾ (Odisha) ಮೂಲದ ಅಂಕಿತಾ ಅಗರ್‌ವಾಲ್ ಎಂಬಾಕೆ ಎಂಬಿಬಿಎಸ್ ಮುಗಿಸಿ ಸ್ನಾತಕೋತ್ತರ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ನೆಲಮಂಗಲ (Nelamangala) ತಾಲೂಕಿನ ಟಿ.ಬೇಗೂರಿನಲ್ಲಿರುವ ಶ್ರೀ ಸಿದ್ದಾರ್ಥ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್‌ನಲ್ಲಿ ಪ್ರವೇಶಾತಿ ಮುಗಿಸಿ ಒಡಿಶಾಗೆ ವಾಪಸ್ ಆಗಬೇಕಿತ್ತು. ಆದರೆ, ಆಟೋದಲ್ಲಿ ಪ್ರಯಾಣ ಮಾಡುವಾಗ, ಆಟೋದಲ್ಲೇ ಬ್ಯಾಗ್ ಬಿಟ್ಟು ಹೋಗಿದ್ದರು. ಮರಿಯಪ್ಪನಪಾಳ್ಯದಿಂದ ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿ ಇಳಿದಿದ್ದಾರೆ. ಆದರೆ, ಬ್ಯಾಗ್ ಮರೆತು ಹೋಗಿದ್ದರು. ಇದನ್ನು ಗಮನಿಸಿದ ಆಟೋ ಚಾಲಕ ರಮೇಶ್ ಬ್ಯಾಗ್ ಅನ್ನು ಪಬ್ಲಿಕ್ ಟಿವಿ ಕಚೇರಿಗೆ ತಲುಪಿಸಿದ್ದಾರೆ.
Advertisement
Advertisement
ಬಳಿಕ ಆಟೋ ಚಾಲಕನ ಮೂಲಕವೇ ಬ್ಯಾಗ್ ಓಪನ್ ಮಾಡಿಸಿದಾಗ, ಬ್ಯಾಗ್‍ನಲ್ಲಿ ಡಿಎಲ್, ಆಧಾರ್, ಎಟಿಎಂ ಕಾರ್ಡ್, ನಗದು, ವೈದ್ಯಕೀಯ ಶಿಕ್ಷಣದ ಮಹತ್ವದ ದಾಖಲೆಗಳು ಇತ್ತು. ಬಳಿಕ ಅವರ ನಂಬರ್ ಪತ್ತೆ ಮಾಡಿ ಕಾಲ್ ಮಾಡಲಾಯಿತು. ಆಟೋದಲ್ಲಿ ಗಾಬರಿಯಿಂದ ಪಬ್ಲಿಕ್ ಟಿವಿ ಕಛೇರಿಗೆ ಬಂದ ಮಹಿಳೆ ಆಟೋ ಚಾಲಕ ರಮೇಶ್‍ಗೆ ಕೈ ಮುಗಿದು ಧನ್ಯವಾದ ತಿಳಿಸಿದರು. ಅಲ್ಲದೇ ಪಬ್ಲಿಕ್ ಟಿವಿ ಮೂಲಕ ದಾಖಲೆಗಳು ಸಿಕ್ಕಿದ್ದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಇದನ್ನೂ ಓದಿ: ಮದುವೆಯಾಗಲು ಹುಡುಗಿ ಹುಡುಕಿಕೊಡುವಂತೆ ಎಸ್‌ಪಿಗೆ ಪತ್ರ ಬರೆದ ಯುವಕ
Advertisement
ಒಟ್ಟಾರೆ, ಗೊತ್ತಿಲ್ಲದ ಬೆಂಗಳೂರಿನಲ್ಲಿ ಬ್ಯಾಗ್ ಕಳೆದುಕೊಂಡು, ದಿಕ್ಕು ತೋಚದೇ ಕಂಗಾಲಾಗಿದ್ದ ಮಹಿಳೆಗೆ ಆಟೋ ಚಾಲಕ ರಮೇಶ್ ದೇವರಂತೆ ಕಂಡರು. ಅದೇನೆ ಆಗಲಿ ಕರುನಾಡಿನ ಜನ ಪಬ್ಲಿಕ್ ಟಿವಿಯ ಮೇಲಿಟ್ಟಿರುವ ನಂಬಿಕೆ, ಪ್ರೀತಿಗೆ ಧನ್ಯವಾದಗಳು. ಇದನ್ನೂ ಓದಿ: ಬ್ರೆಜಿಲ್‍ನ ಎರಡು ಶಾಲೆಗಳಲ್ಲಿ ಶೂಟ್‍ಔಟ್ – ಟೀಚರ್ ಸೇರಿ 3 ಸಾವು, 13 ಮಂದಿಗೆ ಗಾಯ