ಬೆಂಗಳೂರು: ಹುಬ್ಬಳ್ಳಿಯಲ್ಲಿ (Hubballi) ಬಿಜೆಪಿ ಕಾರ್ಯಕರ್ತೆ (BJP Worker) ಮೇಲೆ ಆದ ದೌರ್ಜನ್ಯ ಎಲ್ಲರೂ ತಲೆತಗ್ಗಿಸೋ ಘಟನೆ ಅಂತ ಮಾಜಿ ಗೃಹ ಸಚಿವ, ಶಾಸಕ ಅರಗ ಜ್ಞಾನೇಂದ್ರ (Araga Jnanendra) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು,ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಸುಜಾತ ಅನ್ನೋ ಮಹಿಳೆ ಮೇಲೆ ದೌರ್ಜನ್ಯ ಆಗಿದೆ. ಇದೊಂದು ಅಮಾನುಷವಾದ ಘಟನೆ. ಸುಪ್ರೀಂಕೋರ್ಟ್ ಆದೇಶ ಇದೆ. ಮಹಿಳೆಯ ಬಂಧನಕ್ಕೆ ನಿಯಮ ಇದೆ. ಬಿಜೆಪಿ ಕಾರ್ಯಕರ್ತೆಯನ್ನ ಟೆರೆರಿಸ್ಟ್, ದರೋಡೆಕೋರರನ್ನ ಬಂಧನ ಮಾಡೋ ರೀತಿ ಮಾಡೋ ರೀತಿ ಬಂಧನ ಆಗಿದೆ. ಇದು ಸರಿಯಲ್ಲ ಅಂತ ಕಿಡಿಕಾರಿದರು. ಇದನ್ನೂ ಓದಿ: ಸದ್ಯದಲ್ಲೇ ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ – ಡಿಕೆಶಿ ಹೊಸ ಬಾಂಬ್
ಕಾಂಗ್ರೆಸ್ ಕಾರ್ಪೋರೇಟರ್ ಸ್ಟೇಷನ್ ಹೋಗಿದ್ದಾರೆ. ಇದೆಲ್ಲವೂ ಅನುಮಾನಕ್ಕೆ ಕಾರಣವಾಗಿದೆ. ಇದೆಲ್ಲವೂ ಸಂಶಯಾಸ್ಪದವಾಗಿದೆ. ಸುಜಾತರನ್ನ ಯಾಕೆ ಪೊಲೀಸರು ಬಂಧನ ಮಾಡಿದ್ರು? ಪೊಲೀಸರು ಕಾಂಗ್ರೆಸ್ ಅವರು ದೂರು ಕೊಟ್ಟ ಕೂಡಲೇ ಬಿಜೆಪಿ ಅವರ ಮೇಲೆ ಕೇಸ್ ಹಾಕೋದು ಸರಿಯಲ್ಲ. ಈ ಸರ್ಕಾರ ಬಂದ ಮೇಲೆ ಇಂತಹ ದೌರ್ಜನ್ಯ ಪ್ರಕರಣಗಳು ಜಾಸ್ತಿ ಆಗುತ್ತಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಕ್ರಮ ತೆಗೆದುಕೊಳ್ಳುವ ಕೆಲಸ ಆಗುತ್ತಿದೆ. ಹುಬ್ಬಳ್ಳಿ ಘಟನೆ ಎಲ್ಲರೂ ತಲೆ ತಗ್ಗಿಸೋ ಘಟನೆ ಎಂದು ಹರಿಹಾಯ್ದರು. ಇದನ್ನೂ ಓದಿ: ಬಳ್ಳಾರಿ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯತೆ ಇಲ್ಲ: ಪರಮೇಶ್ವರ್
ಪೊಲೀಸ್ ವರಿಷ್ಠಾಧಿಕಾರಿ ಮೊದಲೇ ಹೇಳಿಕೆ ಕೊಟ್ಟು ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಹುಬ್ಬಳ್ಳಿ ಪೊಲೀಸ್ ಕಮೀಷನರ್ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಪೊಲೀಸರ ಕೃತ್ಯದ ಬಗ್ಗೆ ಸೂಕ್ತ ತನಿಖೆ ಆಗಬೇಕು. ತಪ್ಪು ಮಾಡಿರೋರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಈ ರಾಜ್ಯಕ್ಕೆ ಸಿದ್ದರಾಮಯ್ಯನವರ ಅವಶ್ಯಕತೆ ಇದೆ: ಹೆಚ್‌ಸಿ ಬಾಲಕೃಷ್ಣ

