ರಾಯಚೂರು: ಸುಮಾರು ದಿನಗಳಿಂದ ರೈಲ್ವೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತ ಕಳ್ಳತನದಲ್ಲಿ ತೊಡಗಿದ್ದ ಕುಖ್ಯಾತ ಕಳ್ಳರಿಬ್ಬರನ್ನು ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 334 ಗ್ರಾಂ. ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕನ್ಯಾಕುಮಾರಿ ಎಕ್ಸ್ ಪ್ರೆಸ್ ನಲ್ಲಿ ಕೈಚಳಕ ತೊರುವ ವೇಳೆ ಸುಲ್ತಾನ್, ಮಹಾವೀರ್ ಎಂಬ ಇಬ್ಬರು ಕಳ್ಳರನ್ನು ರಾಯಚೂರಿನ ರೈಲ್ವೆ ಪೊಲೀಸರು ಹಿಡಿದಿದ್ದಾರೆ. ಇವರ ಜೊತೆಯಲ್ಲಿದ್ದ ಮೋನು ಮತ್ತು ಗೋವಿಂದ್ ಎಂಬ ಇನ್ನಿಬ್ಬರು ತಪ್ಪಿಸಿಕೊಂಡಿದ್ದಾರೆ. ಬಂಧಿತರಿಂದ 9 ಲಕ್ಷ 10 ಸಾವಿರ ರೂ. ಮೌಲ್ಯದ 334 ಗ್ರಾಂ. ಚಿನ್ನ ಜಪ್ತಿ ಮಾಡಲಾಗಿದೆ.
ರೈಲು ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಈ ಆರೋಪಿಗಳು ಗುಂಪು ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದರು. ರಾಯಚೂರು, ಬಳ್ಳಾರಿ ರೈಲ್ವೇ ಪೊಲೀಸ್ ಠಾಣಾ ವ್ಯಾಪ್ತಿಯ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಕಳ್ಳರು ಕೊನೆಗೂ ಸಿಕ್ಕಿಬಿದ್ದಿದ್ದಾರೆ.