Latest

ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆ ನಿಲ್ಲಿಸಲ್ಲ: ಉಮೆಶ್ ಕತ್ತಿ

ವಿಜಯಪುರ: ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆ ನಿಲ್ಲಿಸಲ್ಲ ಎಂದು ಸಚಿವ ಉಮೇಶ್ ಕತ್ತಿ ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಬಯಸಿದ್ರೆ ಅನ್ನಭಾಗ್ಯ ಯೋಜನೆ ಬಂದ್ ಮಾಡಲಾಗುವುದು ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಆ ರೀತಿ ಎಲ್ಲಿಯೂ ಹೇಳಿಲ್ಲ. ಅನ್ನಭಾಗ್ಯ ಯೋಜನೆ ಯಾಕೆ ಬಂದ್ ಮಾಡ್ತಾರೆ?, ಅದು ನನ್ನ ಹೇಳಿಕೆಯಲ್ಲ. ಇದು ರಾಜಕೀಯ ಎಂದು ಗರಂ ಆದರು.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಸಚಿವರು, ಸಿದ್ದರಾಮಯ್ಯಗೆ ಹೇಳೋಕೆ ಇಷ್ಟ ಪಡ್ತೀನಿ. ಆಹಾರ ಭದ್ರತಾ ಯೋಜನೆಯಡಿ ಐದು ಕೆಜಿ ಅಕ್ಕಿ ಕೊಡಬೇಕು ಅಂತ ನಾವು ಮಾಡಿದ್ದು. ಕಾನೂನು ನಮ್ಮ ಹಿಂದಿನ ಸರಕಾರ ಮಾಡಿದ್ದು, ಈ ಕಾನೂನು ಇದೆಯೋ ಇಲ್ವೋ. ನಾನು ಮುಖ್ಯಮಂತ್ರಿಯಾದ್ರೆ ಹತ್ತು ಕೆಜಿ ಅಕ್ಕಿ ಕೊಡ್ತೀನಿ ಎಂದು ಹಿಂಗ್ ಹಿಂಗ್ ಹೊರಳಾಡ್ತಾರೆ ಎಂದು ಹೇಳುತ್ತಾ ಸಿದ್ದರಾಮಯ್ಯ ಸ್ಟೈಲ್ ಮಾಡಿ ತೋರಿಸಿದರು.

ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಹತ್ತು ಕೆಜಿ ಅಕ್ಕಿ ಕೊಟ್ಟಿಲ್ಲ. ನಾಲ್ಕು, ಐದು, ಏಳು ಕೆಜಿ ಅಕ್ಕಿ ಕೊಟ್ಟಿದ್ದಾರೆ. ನಾವು ಮಾತ್ರ ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಜೊತೆಗೆ ಜೋಳ, ರಾಗಿ ಕೊಡ್ತಿದ್ದೇವೆ. ಸಿದ್ದರಾಮಯ್ಯ ರಾಜಕೀಯವಾಗಿ ತನಗೆ ಏನು ಬೇಕೋ ಅದನ್ನ ಹೇಳುತ್ತಿದ್ದಾರೆ. ಜನ ಅದನ್ನು ನಂಬಬಾರದು ಎಂದರು. ಇದನ್ನೂ ಓದಿ: ಚಿರಯುವಕರಂತೆ ವಾಲಿಬಾಲ್ ಆಡಿದ ಭಗವಂತ್ ಮಾನ್ – ವೀಡಿಯೋ ವೈರಲ್

ಅನ್ನಭಾಗ್ಯ ಯೋಜನೆ ಬಂದ್ ಮಾಡಿ ಎಂದು ಸುಪ್ರೀಂ ಕೋರ್ಟ್ ಯಾಕೆ ಬಯಸುತ್ತೆ ಹೇಳಿ. ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ಬಯಸಿದ್ರೆ ಅನ್ನಭಾಗ್ಯ ಯೋಜನೆ ಬಂದ್ ಮಾಡ್ತೀವಿ ಅಂತ ನಾನು ಹೇಳಿಲ್ಲ. ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಐದು ಕೆಜಿ ಅಕ್ಕಿ ಕೊಡಬೇಕಂತಿದೆ. ನಮ್ಮ ರಾಜ್ಯದಲ್ಲಿ ಅಕ್ಕಿ ಜೊತೆಗೆ ಜೋಳ, ರಾಗಿ ಕೊಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆ ನಿಲ್ಲಿಸಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.

Live Tv

Leave a Reply

Your email address will not be published.

Back to top button