ಬೆಂಗಳೂರು: ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದ ಹಂತಕರ ಸುಳಿವು ಕೊಟ್ಟವರಿಗೆ ಸರ್ಕಾರ 10 ಲಕ್ಷ ರೂ. ಬಹುಮಾನ ಮೊತ್ತವನ್ನು ನಿಗದಿಪಡಿಸಿದೆ. ಆದರೆ ಈ ಬಹುಮಾನದ ಮೊತ್ತವನ್ನು 10 ಕೋಟಿ ರೂ. ಗೆ ಸರ್ಕಾರ ಹೆಚ್ಚಿಸಬೇಕು ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಹಂತಕರ ಸುಳಿವಿನ ಬಗ್ಗೆ ಮಾಹಿತಿ ನೀಡುವ ಬಹುತೇಕ ಜನರಿಗೆ 10 ಲಕ್ಷ ರೂ. ಮೊತ್ತವನ್ನು ಹಂಚಲು ಸಾಧ್ಯವಿಲ್ಲ. ಅಲ್ಲದೆ ರಾಮಚಂದ್ರ ಗುಹಾ, ರಾಹುಲ್ ಗಾಂಧಿ ಅಂತಹವರಿಗೆ ಇಷ್ಟು ಕಡಿಮೆ ಮೊತ್ತ ಕೊಡಲು ಸಾಧ್ಯವಿಲ್ಲ. ಹೀಗಾಗಿ ಈ ಮೊತ್ತವನ್ನು 10 ಕೋಟಿ ರೂ ಬಹುಮಾನ ಮೊತ್ತ ನೀಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
Advertisement
ಇಂದು ಬಿಜೆಪಿ ಮತ್ತು ಆರ್‍ಎಸ್‍ಎಸ್ ಮೇಲೆ ಆರೋಪ ಮಾಡುತ್ತಿರುವರು, ಮುಂದೆ ಸತ್ಯ ಹೊರ ಬಂದಾಗ ಅವರು ಮುಖಕ್ಕೆ ಬುರ್ಕಾ ಹಾಕಿಕೊಂಡು ಒಡಾಡಬೇಕಾಗುತ್ತದೆ. ಅಲ್ಲದೆ ಇದು ಬೆಂಗಳೂರಿನಲ್ಲಿ ನಡೆಯುತ್ತಿರುವುದು ಪ್ರತಿರೋಧ ಸಮಾವೇಶವಲ್ಲ, ಇದು ಬಿಜೆಪಿ-ಆರ್‍ಎಸ್‍ಎಸ್ ವಿರೋಧಿ ಸಮಾವೇಶವಾಗಿದೆ ಎಂದು ವಾಗ್ದಾಳಿ ನಡೆಸಿದರು.
Advertisement
ಆರ್‍ಎಸ್‍ಎಸ್ ಅನ್ನು ವಿರೋಧಿಸುವುದು ರಾಹುಲ್ ಗಾಂಧಿ ಅವರಿಗೆ ಪರಂಪರೆಯಿಂದ ಬಂದಂತಹ ಬಳುವಳಿಯಾಗಿದೆ. ಅಂದು ನೆಹರು ಗಾಂಧಿ ಹತ್ಯೆಗೆ ಸಂಬಂಧಿಸಿದ ಗುರೂಜಿ ಗೋಲ್ವಾಲ್ಕರ್ ಅವರನ್ನು ಜೈಲಿಗೆ ಕಳುಹಿಸಿದ್ದರು. ಆಮೇಲೆ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ವ್ಯಂಗ್ಯವಾಗಿ ಹೇಳಿದರು.