Connect with us

Bengaluru City

ಬೆಂಗಳೂರು-ಕ್ಯಾಪ್ ಕ್ರಿಕೆಟ್ ಅಕಾಡೆಮಿಗೆ ಚಾಲನೆ ಕೊಟ್ಟ ಇರ್ಫಾನ್ ಪಠಾಣ್

Published

on

ಬೆಂಗಳೂರು: ಟೀಂ ಇಂಡಿಯಾ ವೇಗದ ಬೌಲರ್ ಇಂದು ನಗರದ ಸರ್ಜಾಪುರದ ಹರಳೂರಿನಲ್ಲಿ ಸ್ಥಾಪಿಸಿರುವ ಕ್ರಿಕೆಟ್ ಅಕಾಡೆಮಿ ಆಫ್ ಪಠಾಣ್ಸ್ (ಕ್ಯಾಪ್) ಯನ್ನು ಉದ್ಘಾಟನೆ ಮಾಡಿದರು. ಬರೋಡದ ಕ್ರಿಕೆಟ್ ಆಟಗಾರರಾದ ಇರ್ಫಾನ್ ಪಠಾಣ್ ಹಾಗೂ ಯೂಸೂಫ್ ಪಠಾಣ್ ಮಾಲೀಕತ್ವದಲ್ಲಿ ಈ ಅಕಾಡೆಮಿ ಆರಂಭಗೊಂಡಿದೆ.

ಇರ್ಫಾನ್ ಪಠಾಣ್ ಕಾರ್ಯಕ್ರಮದ ಉದ್ಘಾಟನೆ ನಂತರ ಕೆಲಕಾಲ ಮಕ್ಕಳೊಂದಿಗೆ ಆಟವಾಡಿ ಸಂಭ್ರಮಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಮಕ್ಕಳಿಗೆ ಆಸಕ್ತಿಯಿರುವ ಕ್ರೀಡೆಗಳನ್ನು ಆಡಲು ಅವಕಾಶ ಮಾಡಿಕೊಡಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದರು. ಈ ವೇಳೆ ತಮ್ಮ ಈ ಸಾಧನೆಗೆ ಹೆತ್ತವರು ನೀಡಿದ ಪ್ರೋತ್ಸಾಹವೇ ಕಾರಣ ಎಂದು ನೆನಪಿಸಿಕೊಂಡರು.

ಈ ಅಕಾಡೆಮಿಯು ಅಂತರರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ಹೊಂದಿದೆ. ಮಾಜಿ ಕ್ರಿಕೆಟಿಗರಾದ ಗ್ರೇಗ್ ಚಾಪೆಲ್, ಕ್ಯಾಮರೂನ್ ಟ್ರೆಡ್ವೆಲ್ ಹಾಗೂ ಅರುಣ್ ಸಲಹೆಗಾರರಾಗಿದ್ದಾರೆ. ಪ್ರತಿ ಮಕ್ಕಳ ಮೇಲೂ ವಿಶೇಷ ಗಮನವಿಡಲಾಗುತ್ತದ. ವಿಡಿಯೊ ವಿಶ್ಲೇಷಣೆ ಮಾಡಿ ಸೂಕ್ಷ್ಮ ವಿಷಯಗಳನ್ನು ಅವರಿಗೆ ಕಲಿಸಿಕೊಡಲಾಗುತ್ತದೆ ಎಂದು ಇರ್ಫಾನ್ ಹೇಳಿದರು.

50% ರಿಯಾಯಿತಿ: 6ರಿಂದ 21ರ ವಯೋಮಿತಿಯ ಮಕ್ಕಳಿಗೆ ಇಲ್ಲಿಗೆ ಸೇರಲು ಅವಕಾಶವಿದೆ. ಯುವತಿಯರಿಗೆ ತರಬೇತಿ ಶುಲ್ಕದಲ್ಲಿ 50% ರಷ್ಟು ರಿಯಾಯಿತಿ ನೀಡಲಾಗುತ್ತದೆ. ದೇಶಾದ್ಯಂತ ಒಂಬತ್ತು ನಗರಗಳಲ್ಲಿ ಅಕಾಡೆಮಿಗಳಿವೆ ವಿವರಿಸಿದರು.

Click to comment

Leave a Reply

Your email address will not be published. Required fields are marked *