ಬೆಂಗಳೂರು: ಟೀಂ ಇಂಡಿಯಾ ವೇಗದ ಬೌಲರ್ ಇಂದು ನಗರದ ಸರ್ಜಾಪುರದ ಹರಳೂರಿನಲ್ಲಿ ಸ್ಥಾಪಿಸಿರುವ ಕ್ರಿಕೆಟ್ ಅಕಾಡೆಮಿ ಆಫ್ ಪಠಾಣ್ಸ್ (ಕ್ಯಾಪ್) ಯನ್ನು ಉದ್ಘಾಟನೆ ಮಾಡಿದರು. ಬರೋಡದ ಕ್ರಿಕೆಟ್ ಆಟಗಾರರಾದ ಇರ್ಫಾನ್ ಪಠಾಣ್ ಹಾಗೂ ಯೂಸೂಫ್ ಪಠಾಣ್ ಮಾಲೀಕತ್ವದಲ್ಲಿ ಈ ಅಕಾಡೆಮಿ ಆರಂಭಗೊಂಡಿದೆ.
Advertisement
ಇರ್ಫಾನ್ ಪಠಾಣ್ ಕಾರ್ಯಕ್ರಮದ ಉದ್ಘಾಟನೆ ನಂತರ ಕೆಲಕಾಲ ಮಕ್ಕಳೊಂದಿಗೆ ಆಟವಾಡಿ ಸಂಭ್ರಮಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಮಕ್ಕಳಿಗೆ ಆಸಕ್ತಿಯಿರುವ ಕ್ರೀಡೆಗಳನ್ನು ಆಡಲು ಅವಕಾಶ ಮಾಡಿಕೊಡಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದರು. ಈ ವೇಳೆ ತಮ್ಮ ಈ ಸಾಧನೆಗೆ ಹೆತ್ತವರು ನೀಡಿದ ಪ್ರೋತ್ಸಾಹವೇ ಕಾರಣ ಎಂದು ನೆನಪಿಸಿಕೊಂಡರು.
Advertisement
Advertisement
ಈ ಅಕಾಡೆಮಿಯು ಅಂತರರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ಹೊಂದಿದೆ. ಮಾಜಿ ಕ್ರಿಕೆಟಿಗರಾದ ಗ್ರೇಗ್ ಚಾಪೆಲ್, ಕ್ಯಾಮರೂನ್ ಟ್ರೆಡ್ವೆಲ್ ಹಾಗೂ ಅರುಣ್ ಸಲಹೆಗಾರರಾಗಿದ್ದಾರೆ. ಪ್ರತಿ ಮಕ್ಕಳ ಮೇಲೂ ವಿಶೇಷ ಗಮನವಿಡಲಾಗುತ್ತದ. ವಿಡಿಯೊ ವಿಶ್ಲೇಷಣೆ ಮಾಡಿ ಸೂಕ್ಷ್ಮ ವಿಷಯಗಳನ್ನು ಅವರಿಗೆ ಕಲಿಸಿಕೊಡಲಾಗುತ್ತದೆ ಎಂದು ಇರ್ಫಾನ್ ಹೇಳಿದರು.
Advertisement
50% ರಿಯಾಯಿತಿ: 6ರಿಂದ 21ರ ವಯೋಮಿತಿಯ ಮಕ್ಕಳಿಗೆ ಇಲ್ಲಿಗೆ ಸೇರಲು ಅವಕಾಶವಿದೆ. ಯುವತಿಯರಿಗೆ ತರಬೇತಿ ಶುಲ್ಕದಲ್ಲಿ 50% ರಷ್ಟು ರಿಯಾಯಿತಿ ನೀಡಲಾಗುತ್ತದೆ. ದೇಶಾದ್ಯಂತ ಒಂಬತ್ತು ನಗರಗಳಲ್ಲಿ ಅಕಾಡೆಮಿಗಳಿವೆ ವಿವರಿಸಿದರು.
Thank u
— Irfan Pathan (@IrfanPathan) February 18, 2018