ನವದೆಹಲಿ: ಶಿವಮೊಗ್ಗ ವಿಮಾನ ನಿಲ್ದಾಣವು (Shivamogga Airport) ಇದೇ ಫೆ.27 ರಂದು ಉದ್ಘಾಟನೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಟ್ವೀಟ್ ಮಾಡಿ ಶುಭಹಾರೈಸಿದ್ದಾರೆ.
“ಆರ್ಥಿಕ ಚೇತರಿಕೆಯನ್ನು ತರಲಿ ಹಾಗೂ ಸಂಪರ್ಕ ಕ್ರಾಂತಿಯ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಲಿ” ಶುಭ ಕೋರಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: TNPL ನಲ್ಲೂ ದುಡ್ಡೋ ದುಡ್ಡು – ದುಬಾರಿ ಬೆಲೆಗೆ ಹರಾಜಾದ IPL ಚಾಂಪಿಯನ್ಸ್ ತಂಡದ ಆಟಗಾರ
Advertisement
The airport in Shivamogga will boost commerce, connectivity and enhance tourism. https://t.co/6yT84zpBaC
— Narendra Modi (@narendramodi) February 24, 2023
Advertisement
ಸಂಸದ ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗ ವಿಮಾನ ನಿಲ್ದಾಣದ ಪಕ್ಷಿನೋಟದ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಅದರ ಜೊತೆಗೆ, “ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ಕನಸು ನನಸಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣವು ಕೇವಲ ವಿಮಾನ ನಿಲ್ದಾಣವಾಗದೇ, ಮಲೆನಾಡು ಪ್ರದೇಶದ ಪರಿವರ್ತನೆಯ ಗೇಟ್‌ವೇ ಆಗಿ ಸ್ಥಾಪಿತಗೊಂಡಿದೆ ಎಂದು ಟ್ವೀಟ್ ಮಾಡಿದ್ದರು.
Advertisement
Advertisement
ಇದಕ್ಕೆ ರೀಟ್ವೀಟ್ ಮಾಡಿ ಪ್ರಧಾನಿ ಮೋದಿ ಅವರು, ಶುಭಹಾರೈಸಿದ್ದಾರೆ. ಫೆ. 27 ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರ ಜನ್ಮದಿನ. ಇದೇ ದಿನ ಶಿವಮೊಗ್ಗ ವಿಮಾನ ನಿಲ್ದಾಣವು ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಕೇಸ್ – CBIನಿಂದ ಡಿಕೆಶಿಗೆ ಇನ್ನೂ ಒಂದು ವಾರ ರಿಲೀಫ್
[brid partner=56869869 player=32851 video=960834 autoplay=true]