ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಲೆಕ್ಕಪತ್ರ ಯಾವುದೂ ಸರಿ ಇಲ್ಲ ಎಂದು ಹಲವು ವರ್ಷಗಳಿಂದ ಅದರ ಸದಸ್ಯರೇ ಮಾತನಾಡುತ್ತಿದ್ದರು. ಈ ಸಂಬಂಧ ಅನೇಕ ಬಾರಿ ಗಲಾಟೆಗಳು ನಡೆದಿವೆ. ಅಧಿಕಾರದ ಚುಕ್ಕಾಣೆ ಹಿಡಿಯಲು ಹೈಡ್ರಾಮಾ ಕೂಡ ನಡೆದಿತ್ತು. ಇದೀಗ ಇಬ್ಬರು ನಿರ್ದೇಶಕರಿಗೆ ಲೆಕ್ಕ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ ಆಡಳಿತಾಧಿಕಾರಿ. ಈ ಕುರಿತು ಅವರು ಹಿಂದಿನ ಅಧ್ಯಕ್ಷರುಗಳಾದ ಡಾ.ನಾಗೇಂದ್ರ ಪ್ರಸಾದ್ ಹಾಗೂ ಟೇಸಿ ವೆಂಕಟೇಶ್ ಅವರಿಗೆ ತಿಳುವಳಿಕೆ ಪತ್ರ ಕಳುಹಿಸಿದ್ದಾರೆ.
Advertisement
ಆಡಳಿತಾಧಿಕಾರಿ ಎಸ್.ಜಿ.ಮಂಜುನಾಥ್ ಸಿಂಗ್ ಕಳುಹಿಸಿರುವ ಪತ್ರದಲ್ಲಿ, “ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದಲ್ಲಿ ಡ್ರಾ ಮಾಡಿರುವಂತಹ ಹಣದ ಖರ್ಚಿನ ವಿವರ ನೀಡುವ ಬಗ್ಗೆ ಟೇಸಿ ವೆಂಕಟೇಶ್ ಆದ ನೀವು ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ನಿಮ್ಮ ಅಧಿಕಾರ ಅವಧಿಯಲ್ಲಿ ಬ್ಯಾಂಕಿನಿಂದ ವಿವಿಧ ದಿನಾಂಕಗಳಲ್ಲಿ ಹಣವನ್ನು ಡ್ರಾ ಮಾಡಿರುತ್ತೀರಿ. ಆದರೆ ದಾಖಲೆಗಳನ್ನು ಪರಿಶೀಲಿಸಿದ ನಿಮ್ಮ ಅವಧಿಯಲ್ಲಿ ಡ್ರಾ ಮಾಡಿದ ಹಣಕ್ಕೆ ಸಂಬಂಧಿಸಿದಂತೆ ಕಾರ್ಯಕಾರಿ ಸಮಿತಿ ನಡಾವಳಿ, ವೋಚರ್ಸ್, ನಗದು ಪುಸ್ತಕವನ್ನು ಈ ನೋಟಿಸ್ ನೀಡಿದ ಹತ್ತು ದಿನಗಳೊಳಗಾಗಿ ಸಲ್ಲಿಸತಕ್ಕದ್ದು. ತಪ್ಪಿದ್ದಲ್ಲಿ ನಿಮ್ಮ ವಿರುದ್ಧ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಇಂದು ನೋಟಿಸ್ ಕಳುಹಿಸಲಾಗಿದೆ. ಇದನ್ನೂ ಓದಿ:ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್
Advertisement
Advertisement
ಮಾಜಿ ಅಧ್ಯಕ್ಷರಾದ ವಿ. ನಾಗೇಂದ್ರ ಪ್ರಸಾದ್ ಅವರಿಗೂ ಇದೇ ಮಾದರಿಯ ಪತ್ರವನ್ನು ಕಳುಹಿಸಲಾಗಿದ್ದು, ಅವರಿಗೂ ನೋಟಿಸ್ ಕಳುಹಿಸಿದ ಹತ್ತು ದಿನಗಳೊಳಗೆ ಡ್ರಾ ಮಾಡಿದ ಹಣಕ್ಕೆ ಸಂಬಂಧಿಸಿದಂತೆ ಕಾರ್ಯಕಾರಿ ಸಮಿತಿ ನಡಾವಳಿ, ವೋಚರ್ಸ್, ನಗದು ಪುಸ್ತಕವನ್ನು ಈ ನೋಟಿಸ್ ನೀಡಿದ ಹತ್ತು ದಿನಗಳೊಳಗಾಗಿ ಸಲ್ಲಿಸತಕ್ಕದ್ದು. ತಪ್ಪಿದ್ದಲ್ಲಿ ನಿಮ್ಮ ವಿರುದ್ಧ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ನೋಟಿಸ್ ಕಳುಹಿಸಿದ್ದಾರೆ.