ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಹುಟ್ಟು ಹಬ್ಬದ ದಿನದಂದೇ ನಟಿ ಸಹನಾ ತಮ್ಮ ಅಪಾರ್ಟಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಪತಿ ಸಾಜದ್ ಅವರ ಹಿಂಸೆಯಿಂದಲೇ ಮಗಳ ಸಾವಾಗಿದೆ ಎಂದು ಸಹನಾ ಕುಟುಂಬಸ್ಥರು ಆರೋಪಿಸಿದ್ದರು. ಸಹನಾ ಸಾವನ್ನು ಮಲಯಾಳಂ ಸಿನಿಮಾ ರಂಗ ಇನ್ನೂ ಅರಗಿಸಿಕೊಂಡಿಲ್ಲ, ಅಷ್ಟರಲ್ಲಿ ಮತ್ತೋರ್ವ ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ : ಹೊಂಬಾಳೆ ಫಿಲ್ಮಸ್ ಬಘೀರನಿಗೆ ಮೇ 20ಕ್ಕೆ ಮುಹೂರ್ತ : ಶ್ರೀಮುರುಳಿ ನಾಯಕ
ನಟಿ ಕಂ ಮಾಡೆಲ್ ಆಗಿದ್ದ ಶೆರಿನ್ ಕೆಲಿನ ಮ್ಯಾಥೋ ಅವರು ಕೇರಳದ ಚಕ್ಕರಪಂರಬು ಬಳಿಯ ಅಪಾರ್ಟ್ಮೆಂಟ್ ನಲ್ಲಿ ಇಂದು ಶವವಾಗಿ ಪತ್ತೆಯಾಗಿದ್ದಾರೆ. ಕೇವಲ 26 ವರ್ಷದ ಈ ನಟಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಯಾರದ್ದೋ ಜೊತೆ ವಿಡಿಯೋ ಕಾಲ್ ಮಾಡುತ್ತಿದ್ದಾಗಲೇ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಇದನ್ನೂ ಓದಿ : ಮನೆಗೆ ಕರೆಯಿಸಿಕೊಳ್ಳುವಂಥ ಅರ್ಹತೆ ಬಾಲಿವುಡ್ ನಲ್ಲಿ ಯಾರಿಗೂ ಇಲ್ಲ : ಕಂಗನಾ ರಣಾವತ್
ಶೆರಿನ್ ಆತ್ಮಹತ್ಯೆ ಮಾಡಿಕೊಂಡ ವಿಷಯವನ್ನು ಅವರ ರೂಮ್ ಮೇಟ್ಸ್ ಖಚಿತ ಪಡಿಸಿದ್ದು, ವಿಡಿಯೋ ಕಾಲ್ ನಲ್ಲಿ ಇರುವಾಗಲೇ ಶೆರಿನ್ ನೇಣು ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವು ದಿನಗಳಿಂದ ಶೆರಿನ್ ಡಿಪ್ರೆಶನ್ ನಿಂದ ಇವರು ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಹಾಗಾಗಿ ಇವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ ರೂಮ್ ಮೆಟ್ಸ್.