ಕನಸಿನ ರಾಣಿ ಮಾಲಾಶ್ರೀ (Malashree), ನಿರ್ಮಾಪಕ ರಾಮು (Ramu)ಪುತ್ರಿ ರಾಧನಾ ರಾಮ್ ಈಗ ತಮ್ಮ ಹೆಸರನ್ನು ಆರಾಧನಾ (Aradhanaa) ಎಂದು ಬದಲಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಮಾಲಾಶ್ರೀ ‘ನಾನು, ರಾಕ್ ಲೈನ್ ವೆಂಕಟೇಶ್ ಹಾಗೂ ತರುಣ್ ಸುಧೀರ್ ಮೂರು ಜನ ಚರ್ಚಿಸಿ ಆರಾಧನಾ ಎಂಬ ಹೆಸರನ್ನು (Name) ಆಯ್ಕೆ ಮಾಡಿದ್ದೇವೆ. ಈ ಹೆಸರು ಬರೀ ‘ಕಾಟೇರ’ ಚಿತ್ರಕ್ಕೆ ಮಾತ್ರವಲ್ಲ. ಇನ್ನು ಮುಂದೆ ನನ್ನ ಮಗಳ ಹೆಸರೆ ಆರಾಧನಾ. ಮುಂದಿನ ಚಿತ್ರಗಳಲ್ಲೂ ಆರಾಧನಾ ಎಂಬ ಹೆಸರಿನಿಂದಲೇ ಅಭಿನಯಿಸಿಲಿದ್ದಾರೆ. ತಾವೆಲ್ಲರೂ ಮುಂದೆ ಆರಾಧನಾ ಹೆಸರನ್ನೇ ಬಳಸಿಕೊಳ್ಳಬೇಕೆಂದು’ ಮಾಲಾಶ್ರೀ ವಿನಂತಿಸಿದ್ದಾರೆ.
ಈಗಾಗಲೇ ಆರಾಧನಾ ರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಬಹುಭಾಷಾ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇದನ್ನೂ ಓದಿ:ಚಿಕಿತ್ಸೆಗಾಗಿ ಮತ್ತೆ ಅಮೆರಿಕಾಗೆ ಹಾರಿದ್ರಾ ನಟಿ- ಏನಾಯ್ತು ಸಮಂತಾಗೆ?
- Advertisement
- Advertisement
ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕ ರಾಮು ಅವರ ಸಾಧನೆ ಕೊಡುಗೆ ಅಪಾರ. ಮಾಲಾಶ್ರೀ ಮತ್ತು ರಾಮು ದಂಪತಿ ಸಾಕಷ್ಟು ವರ್ಷಗಳಿಂದ ಕಲಾಸೇವೆ ಮಾಡುತ್ತಲ್ಲೇ ಬಂದವರು. ಇದೀಗ ಈ ಕುಟುಂಬದಿಂದ ಜ್ಯೂ.ಮಾಲಾಶ್ರೀ ಆರಾಧನಾ ರಾಮ್ ಕೂಡ ಚಿತ್ರರಂಗದಲ್ಲಿ ಮಿಂಚಲು ಸಕಲ ತಯಾರಿ ಮಾಡಿಕೊಂಡು ಬಂದಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಮತ್ತು ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಬಿಗ್ ಬಜೆಜ್ ಸಿನಿಮಾದಲ್ಲಿ ರಾಧನಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದ ರಾಧನಾ ಲುಕ್ ಕೂಡ ರಿವೀಲ್ ಆಗಿದ್ದು, ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತಮ್ಮ ಮೊದಲ ಚಿತ್ರದಲ್ಲಿಯೇ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ತಾಯಿ ಮಾಲಾಶ್ರೀ ಅಂತೆಯೇ ನಾಯಕಿಯಾಗಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.
Web Stories