ಇತ್ತೀಚೆಗಷ್ಟೇ ಶೂಟಿಂಗ್ (Shooting) ವೇಳೆಯ ಕನ್ನಡದ ನಟ ಶ್ರೀಮುರುಳಿ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದರು. ಇದರ ಬೆನ್ನಲ್ಲೆ ಹಿಂದಿ ಕಿರುತೆರೆಯ ಕ್ಷೇತ್ರದಿಂದ ಮತ್ತೊಂದು ಸುದ್ದಿ ಬಂದಿತ್ತು. ಕಿರುತೆರೆಯ ಖ್ಯಾತ ನಟಿ ದಿವ್ಯಾಂಕಾ ತ್ರಿಪಾಠಿಗೆ (Divyanka Tripathi) ಅಪಘಾತವಾಗಿದ್ದು (Accident), ಅವರ ಎರಡೂ ಕೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.
ಅತೀ ಎತ್ತರದ ಸ್ಥಳದಿಂದ ಬಿದ್ದ ಕಾರಣದಿಂದಾಗಿ ಎರಡೂ ಕೈಗಳ ಮಣಿಕಟ್ಟುಗಳು ಮುರಿದಿದ್ದವು. ಇದು ಜಿಮ್ ನಲ್ಲಿ ನಡೆದ ಘಟನೆ ಎಂದು ಹೇಳಲಾಗುತ್ತಿದೆ. ಆಗ ಕೂಡಲೇ ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿದೆ ಎಂದು ಪತಿ ವಿವೇಕ್ ತಿಳಿಸಿದ್ದರು. ಈಗ ಅವರು ಮನೆಗೆ ವಾಪಸ್ಸಾಗಿದ್ದಾರೆ. ವಿಶ್ರಾಂತಿ ತಗೆದುಕೊಳ್ಳಲು ವೈದ್ಯರು ತಿಳಿಸಿದ್ದಾರೆ.
ನಾನು ಈಗ ವಿಶ್ರಾಂತಿಯಲ್ಲಿ ಇದ್ದೇನೆ. ವೈದ್ಯರು ಚೆನ್ನಾಗಿಯೇ ನೋಡಿಕೊಂಡರು. ಆದಷ್ಟು ಬೇಗ ಸರಿ ಹೋಗಿ ಮತ್ತೆ ಶೂಟಿಂಗ್ ಗೆ ಮರಳುತ್ತೇನೆ ಎಂದು ಅವರು ಸೋಷಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬೇಗ ಸರಿ ಹೋಗಿ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಮಧ್ಯ ಪ್ರದೇಶ ಮೂಲದ ದಿವ್ಯಾಂಕ ಕೇವಲ ಕಿರುತೆರೆ ನಟಿ ಮಾತ್ರವಲ್ಲ, ಆಕಾಶವಾಣಿ ಕಲಾವಿದೆ ಕೂಡ ಆಗಿದ್ದಾರೆ. ಅಲ್ಲದೇ ಅನೇಕ ರಿಯಾಲಿಟಿ ಶೋಗಳನ್ನೂ ಅವರು ಭಾಗಿಯಾಗಿದ್ದಾರೆ. ವೆಬ್ ಸಿರೀಸ್ ನಲ್ಲೂ ಅವರು ಕಾಣಿಸಿಕೊಂಡಿದ್ದಾರೆ.