ಕೊರಿಯನ್ ಚಿತ್ರೋದ್ಯಮದ ಜನಪ್ರಿಯ ನಟಿ ಪಾರ್ಕ್ ಸೂ ಯನ್ ನಿಧನರಾಗಿದ್ದಾರೆ. ಮೆಟ್ಟಿಲುಗಳಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಜೆಜು ದ್ವೀಪದಲ್ಲಿ ಅವರು ಪ್ರದರ್ಶನ ನೀಡಬೇಕಿತ್ತು.ಅದಕ್ಕೂ ಮುನ್ನ ಈ ದುರಂತ ಸಂಭವಿಸಿದೆ.
Advertisement
ಮೆಟ್ಟಿಲುಗಳಿಂದ ಆಯಾ ತಪ್ಪಿ ಬಿದ್ದಾಗ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಬ್ರೇನ್ ಡೆಡ್ ಆದ ಕಾರಣದಿಂದಾಗಿ ವೈದ್ಯರಿಗೆ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ. ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸುತ್ತಿದ್ದಂತೆಯೇ ಆಕೆಯ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇದನ್ನೂ ಓದಿ:ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ
Advertisement
Advertisement
ಈ ಕುರಿತು ಮಾತನಾಡಿರುವ ನಟಿಯ ತಾಯಿ, ‘ನನ್ನ ಮಗಳ ಹೃದಯ ಬಿಡಿತ ಇನ್ನೂ ಹಾಗೆಯೇ ಇದೆ. ಬ್ರೈನ್ ಡೆಡ್ ಆಗಿದೆ. ಹಾಗಾಗಿ ಆಕೆಯ ಅಂಗಾಂಗಗಳು ಅಗತ್ಯ ಇರುವವರಿಗೆ ಉಪಯೋಗಕ್ಕೆ ಬರಲಿ. ಈ ಮೂಲಕ ನನ್ನ ಮಗಳು ಕೂಡ ಜೀವಂತವಾಗಿ ಇರುತ್ತಾಳೆ ಎನ್ನುವ ಸಮಾಧಾನ ನಮಗೂ ಇರಲಿದೆ’ ಎಂದಿದ್ದಾರೆ.
Advertisement
1994ರಲ್ಲಿ ಪಾರ್ಕ್ ಜನಿಸಿದ್ದು ಈಗ ಅವರಿಗೆ ಕೇವಲ 29 ವರ್ಷ ಮಾತ್ರ. ಸೋಮವಾರ ಆಕೆ ಅಂತಿಮ ಸಂಸ್ಕಾರ ನಡೆದಿದ್ದು, ಅಗಲಿದ ನಟಿಗೆ ಹಲವರು ಕಂಬಣಿ ಮಿಡಿದಿದ್ದಾರೆ. ಇಂದು ನಟಿ ಗೌರವಾರ್ಥ ಮೆರವಣಿಗೆ ಕೂಡ ನಡೆದಿದೆ. ದಿ ಸೆಲ್ಲರ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಪಾರ್ಕ್, ಅತೀ ಸಣ್ಣ ವಯಸ್ಸಿನಲ್ಲೇ ದುರಂತ ಅಂತ್ಯ ಕಂಡಿದ್ದಾರೆ.