ಸಾವು ಯಾರಿಗೆ ಹೇಗೆ ಬರುತ್ತದೋ ಹೇಳೋರು ಯಾರು? ನಟನೊಬ್ಬ ನಟಿಸುತ್ತಾ ವೇದಿಕೆಯ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ (Passed away) ಘಟನೆ ಯಲಹಂಕದ ಸಾತನೂರು ಗ್ರಾಮದಲ್ಲಿ ನಡೆದಿದೆ. 72ರ ವಯಸ್ಸಿನ ಎನ್.ಮುನಿಕೆಂಪಣ್ಣ (N. Munikempanna) ನಿನ್ನೆ ರಾತ್ರಿ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದರು. ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು ಬಿದ್ದರು.
ಮಧ್ಯರಾತ್ರಿಯವರೆಗೂ ಅದ್ಭುತವಾಗಿಯೇ ನಾಟಕ (Drama) ಪ್ರದರ್ಶನ ಮಾಡಿದ ಮುನಿಕೆಂಪಣ್ಣ, ಮಧ್ಯರಾತ್ರಿ 1 ಗಂಟೆಯ ವೇಳೆಗೆ ನಾಟಕ ಆಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇವರು ನಿವೃತ್ತ ಉಪನ್ಯಾಸಕರೂ ಆಗಿದ್ದಾರೆ. ದೇವನಹಳ್ಳಿಯಲ್ಲಿ ನಡೆದ 28 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಮುನಿಕೆಂಪಣ್ಣ ಅವರಿಗೆ ಹೃದಯಾಘಾತವಾಗಿದ್ದು, ಅಪಾರ ಅಭಿಮಾನಿಗಳನ್ನು ಅಗಲಿದಿದ್ದಾರೆ. ಹುಟ್ಟೂರು ಅರದೇಶನಹಳ್ಳಿಯಲ್ಲಿ ಅಂತ್ಯ ಸಂಸ್ಕಾರದಕ್ಕೆ ಸಿದ್ದತೆ ಮಾಡಲಾಗಿದೆ.