ಬೆಂಗಳೂರಿನ ಸಲೂನ್ ಶಾಪ್ ವೊಂದರಲ್ಲಿ ಬ್ಯೂಟಿಷಿಯನ್ (Beautician) ಆಗಿ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಮೋಸ (cheating) ಮಾಡಿರುವ ಘಟನೆ ನಡೆದಿದೆ. ಸಿನಿಮಾದಲ್ಲಿ ಅವಕಾಶ ಕೊಡಿಸ್ತೀನಿ ಅಂತಾ ಪರಿಚಯ ಮಾಡಿಕೊಂಡಿದ್ದ ಸಹ ನಟನೊಬ್ಬ ಲೈಂಗಿಕವಾಗಿಯೂ ಆ ಹುಡುಗಿಯನ್ನು ಬಳಸಿಕೊಂಡಿದ್ದಾನೆ ಎಂದು ಆ ಹುಡುಗಿ ದೂರು ನೀಡಿದ್ದಾಳೆ.
Advertisement
ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡಿದ್ದ ಸಹನಟ ಸಂತೋಷ್ (Santosh), ಆ ಹುಡುಗಿಗೆ ಪ್ರೀತಿಯ ನಾಟಕವಾಡಿ, ಚಿತ್ರದಲ್ಲಿ ನಾಯಕಿಯನ್ನಾಗಿ ಮಾಡುತ್ತೇನೆ ಎಂಧು ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡು ಕೈಕೊಟ್ಟು ಪರಾರಿ ಆಗಿದ್ದಾನೆ ಎಂದು ಹುಡುಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
Advertisement
Advertisement
ಆ ಹುಡುಗನ ಸಹವಾಸ ಬೇಡ ಅಂತಾ ಯುವತಿ ಸುಮ್ಮನಿದ್ರು ಆಗಾಗ ಮನೆ ಬಳಿ ಬಂದು ತನ್ನ ಜೊತೆ ಬರುವಂತೆ ಕಾಟ ಕೊಡುತ್ತಿದ್ದ ಹಾಗೂ ಬರದಿದ್ದರೇ ರಸ್ತೆ ರಸ್ತೆಯಲ್ಲಿ ಹೊಡೆತಿದ್ದ ಎಂದೂ ದೂರಿನಲ್ಲಿ ಹುಡುಗಿ ಉಲ್ಲೇಖ ಮಾಡಿದ್ದಾಳೆ. ಅವನ ಕಾಟಕ್ಕೆ ಮನ ನೊಂದು ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾಳೆ. ಠಾಣೆ ಎದುರೇ ಆ ಹುಡುಗ ಹಲ್ಲೆ ಮಾಡಿದರೂ ಕಣ್ಣು ಕಾಣದೆ ಕುರುಡರಂತೆ ಪೊಲೀಸರು ವರ್ತನೆ ಮಾಡಿದ್ದಾರೆ ಎಂದು ಹುಡುಗಿ ಆರೋಪ ಮಾಡಿದ್ದಾಳೆ.
Advertisement
ಕಳೆದ ಆರು ತಿಂಗಳಿಂದ ನ್ಯಾಯಕ್ಕಾಗಿ ಅಲೆದಾಟ ಮಾಡುತ್ತಿರುವೆ. ಫೆಬ್ರವರಿ 15 ರಂದು ಎರಡನೆ ಬಾರಿಗೆ ಎಫ್ಐಆರ್ ದಾಖಲಿಸಿದ್ದೇನೆ. ಆರು ತಿಂಗಳ ಹಿಂದೆ ಒಂದು ಎಫ್ಐಆರ್ ದಾಖಲಾಗಿತ್ತು ಎಂದು ಹುಡುಗಿ ಆರೋಪಿಸಿದ್ದಾರೆ.