ಈಗಾಗಲೇ ಸಾಕಷ್ಟು ಬಾರಿ ಅಶಕ್ತರ ನೆರವಿಗೆ ನಿಂತಿರುವ ನಟ, ನಿರ್ಮಾಪಕ, ನಿರ್ದೇಶಕ ರಾಘವ್ ಲಾರೆನ್ಸ್ (Raghav Lawrence), ಈಗ ರೈತರ ಸಹಾಯಕ್ಕೆ ಹಸ್ತ ಚಾಚಿದ್ದಾರೆ. ಮೇ 1ರಂದು ಕಾರ್ಮಿಕ ದಿನಾಚರಣೆಯ ದಿನದಂದು ರೈತರಿಗೆ ಟ್ರ್ಯಾಕ್ಟರ್ (Tractor) ಅನ್ನು ಉಚಿತ ಕೊಡುವುದಾಗಿ ಅವರು ಘೋಷಣೆ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತಂತೆ ಪೋಸ್ಟ್ ಮಾಡಿರುವ ರಾಘವ್ ಲಾರೆನ್ಸ್, ರೈತರಿಗೆ ಉಚಿತವಾಗಿ 10 ಟ್ರ್ಯಾಕ್ಟರ್ ಗಳನ್ನು ಕೊಡಲು ಮುಂದಾಗಿರುವೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ರೈತರ ಕಣ್ಣಲ್ಲಿ ನಾನು ಆನಂದವನ್ನು ಕಾಣಲು ಬಯಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
- Advertisement
- Advertisement
ರೈತರಿಗೆ ಟ್ರ್ಯಾಕ್ಟರ್ ಘೋಷಣೆ ಮಾಡಿರುವ ರಾಘವ್ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ. ನಿಮ್ಮೊಂದಿಗೆ ಸದಾ ನಾವಿರುತ್ತೇವೆ. ಈ ಸೇವೆ ನಿರಂತರವಾಗಿರಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ. ಅಲ್ಲದೇ, ರೈತರ ನೆರವಿಗೆ ಹೀಗೆ ಎಲ್ಲರೂ ಬರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.