– ಬೈಕ್‌ಗೆ ಹಚ್ಚಿದ ಬೆಂಕಿಯಿಂದ ಸಿಗರೇಟ್ ಹಚ್ಚಿ ಧಮ್ ಹೊಡೆದು ಎಸ್ಕೇಪ್
ಬೆಂಗಳೂರು: ಪಿಜಿ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್‌ಗೆ (Bullet Bike) ಬೆಂಕಿ ಹಚ್ಚಿದ್ದ ಆರೋಪಿಯನ್ನು ಪೀಣ್ಯ ಪೊಲೀಸರು (Peenya Police) ಬಂಧಿಸಿದ್ದಾರೆ.
Advertisement
ಪುಲ್ಕಿತ್ (25) ಬಂಧಿತ ಆರೋಪಿ. ಈತ ಪೀಣ್ಯಾದ ಹೆಚ್‌ಎಂಟಿ ಲೇಔಟ್‌ನ (HMT Layout) ಪಿಜಿಯೊಂದರ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್‌ಗೆ ಬೆಂಕಿ ಹಚ್ಚಿದ್ದ. ಸೆ.19ರಂದು ಬೈಕ್‌ನಿಂದಲೇ ಪೆಟ್ರೋಲ್ ತೆಗೆದು ಅದೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಇಷ್ಟು ಮಾತ್ರವಲ್ಲದೇ ಬೈಕ್‌ಗೆ ಹೊತ್ತಿಕೊಂಡ ಬೆಂಕಿಯಿಂದಲೇ ಸಿಗರೇಟ್‌ಗೆ ಬೆಂಕಿ ಹಚ್ಚಿ ಧಮ್ ಹೊಡೆದು ಎಸ್ಕೇಪ್ ಆಗಿದ್ದ. ಬುಲೆಟ್ ಬೈಕ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಮೂರು ಬೈಕ್‌ಗಳು ಬೆಂಕಿಗೆ ಆಹುತಿಯಾಗಿತ್ತು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್; ಸ್ಮಶಾನದಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ
Advertisement
Advertisement
ಬೈಕ್ ಬೆಂಕಿಗಾಹುತಿಯಾದ ಬಳಿಕ ಬುಲೆಟ್ ಬೈಕ್ ಸವಾರ ದೀಪಾಂಶು ಎಂಬವರು ಈ ಬಗ್ಗೆ ಪೀಣ್ಯಾ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಬುಲೆಟ್ ಬೈಕ್‌ಗೆ ಬೆಂಕಿ ಹಚ್ಚಿದ್ದ ಪುಲ್ಕಿತ್‌ನನ್ನು ಪೀಣ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಲವು ದಿನಗಳಿಂದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಖರೀದಿಸುವ ಆಸೆಯನ್ನು ಪುಲ್ಕಿತ್ ಹೊಂದಿದ್ದ. ಬುಲೆಟ್ ಖರೀದಿಗೆ ಹಣ ಹೊಂದಿಸಲಿಕ್ಕೆ ಆಗದಿದ್ದಾಗ ಬೇರೆಯವರ ಬುಲೆಟ್ ಬೈಕ್ ಸೌಂಡ್ ಆದರೆ ಕೋಪಗೊಳ್ಳುತ್ತಿದ್ದ. ಬುಲೆಟ್ ಬೈಕ್ ತೆಗೆದುಕೊಳ್ಳುವ ಆಸೆಯಿತ್ತು. ಹಣವಿಲ್ಲದ್ದಕ್ಕೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಕೋಪಬಂದು ಪಿಜಿಗಳ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್‌ಗೆ ಬೆಂಕಿ ಹಚ್ಚಿದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಗಣೇಶ ಪ್ರತಿಷ್ಠಾಪಿಸಿದ ಸಿಬ್ಬಂದಿಗೆ ನೋಟಿಸ್ – ಅಧೀಕ್ಷಕರ ವಿರುದ್ಧ ಹಿಂದೂ ಸಂಘಟನೆಗಳು ಕಿಡಿ
Advertisement