ಜೈಲು ಸೇರಿದ್ದವರಿಂದ ದೂರು ಕೊಟ್ಟವರ ಮೇಲೆ ಹಲ್ಲೆ ಆರೋಪ

Public TV
1 Min Read
RAMANAGAR CRIME

– ಚುನಾವಣಾಧಿಕಾರಿ ಮೇಲೆ ಕಾರು ಹತ್ತಿಸಲು ಯತ್ನಿಸಿ ಜೈಲು ಸೇರಿದ್ದ ಆರೋಪಿಗಳು

ರಾಮನಗರ: ಡೈರಿ ಚುನಾವಣೆ ವಿಚಾರದಲ್ಲಿ ಚುನಾವಣಾಧಿಕಾರಿ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದ ಪ್ರಕರಣದ ಆರೋಪಿಗಳು ಜೈಲಿನಿಂದ ಹೊರಬಂದು ಮತ್ತೆ ಗ್ರಾಮದಲ್ಲಿ ದಾಂಧಲೆ ನಡೆಸಿದ ಆರೋಪ ಕೇಳಿಬಂದಿದೆ.

ನಾಲ್ಕು ತಿಂಗಳ ಬಳಿಕ ಬೇಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿ ಗ್ರಾಮಕ್ಕೆ ಬಂದಿರುವ ಶ್ರೀನಿವಾಸ್ ಮತ್ತು ಹೇಮಂತ್, ದೂರು ಕೊಟ್ಟ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಕುದೂರು ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ಗ್ರಾಮಸ್ಥರು ದೂರು ದಾಖಲಿಸಿದ್ದಾರೆ. ತಮಗೆ ರಕ್ಷಣೆ ಕೊಡುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಚುನಾವಣಾಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಬ್ಯಾಲೆಟ್ ಪೇಪರ್ ದೋಚಿದ ಕಿಡಿಗೇಡಿಗಳು

ಮಾಗಡಿ ತಾಲೂಕಿನ ಹುಳ್ಳೇನಹಳ್ಳಿ ಗ್ರಾಮದಲ್ಲಿ ಕಳೆದ ಸೆ.27 ರಂದು ಗ್ರಾಮದ ಡೈರಿ ಚುನಾವಣೆ ತಡೆಯಲು ಕೆಲ ಕಿಡಿಗೇಡಿಗಳು ಚುನಾವಣಾಧಿಕಾರಿಗಳ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದರು. ಪ್ರಕರಣ ಸಂಬಂಧ ಮೂರ್ನಾಲ್ಕು ಮಂದಿಯನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಇದನ್ನೂ ಓದಿ: ಪೊಲೀಸ್ ಕಸ್ಟಡಿಯಿಂದ ಕಳ್ಳ ಎಸ್ಕೇಪ್ – ಪಿಎಸ್‌ಐ ಸೇರಿ ಐವರು ಪೊಲೀಸರು ಸಸ್ಪೆಂಡ್

Share This Article