– 15 ಲಕ್ಷ ಅವ್ಯವಹಾರದ ಬಗ್ಗೆ ತನಿಖೆಗೆ ಒತ್ತಾಯಿಸಿ ನಾನು ಪತ್ರ ಬರೆದಾಗಿನಿಂದ ಇದು ಶುರುವಾಯ್ತು
ಬೆಂಗಳೂರು: ನನ್ನ ಮೇಲಿನ ಆರೋಪ ನಿರಾಧಾರ ಎಂದು ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪವನ್ನು ಬಿಜೆಪಿ ಶಾಸಕ ಮುನಿರತ್ನ (Muniratna) ಅಲ್ಲಗಳೆದಿದ್ದಾರೆ.
Advertisement
ಪ್ರಕರಣ ಸಂಬಂಧ ವೀಡಿಯೋ ಮೂಲಕ ಮಾತನಾಡಿರುವ ಮುನಿರತ್ನ, ಲೋಕಸಭೆ ನಂತರ ನನ್ನ ವಿರುದ್ಧ ಬಹಳಷ್ಟು ಸಂಚು ನಡೆದಿದೆ. ನಿನ್ನೆ ದೂರು ಕೊಟ್ಟ ವ್ಯಕ್ತಿ ಏಳೆಂಟು ವರ್ಷಗಳಿಂದ ನಮ್ಮ ಬಳಿ ಕೆಲಸ ಮಾಡ್ತಿದ್ದ. ಈ ಗುತ್ತಿಗೆದಾರನಿಗೆ ಈ ಏಳೆಂಟು ವರ್ಷಗಳಲ್ಲಿ ತೊಂದರೆ ಕೊಟ್ಟಿಲ್ಲ, ಈಗ ತೊಂದರೆ ಕೊಡ್ತೀನಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಶಾಸಕ ಮುನಿರತ್ನ ಪೊಲೀಸ್ ವಶಕ್ಕೆ
Advertisement
Advertisement
ದೇವರಾಜು ಅರಸು ಟ್ರಕ್ ಟರ್ಮಿನಲ್‌ನಲ್ಲಿ ಪ್ರತಿ ತಿಂಗಳು 15 ಲಕ್ಷ ಅವ್ಯವಹಾರ ಆಗ್ತಿದೆ ಅಂತಾ ನನಗೆ ದೂರು ಬಂತು. ನಾನು ಇದರ ತನಿಖೆ ಮಾಡಿ ಅಂತಾ ಪತ್ರ ಬರೆದೆ, ಆವತ್ತಿನಿಂದ ಇದು ಪ್ರಾರಂಭವಾಯ್ತು. ಯಾವುದಾದರೊಂದು ರೀತಿಯಲ್ಲಿ ನನಗೆ ತೊಂದರೆ ಕೊಡಬೇಕು ಅಂತಾ ಸಂಚು ನಡೆದಿದೆ. 15 ಲಕ್ಷ ಪಡ್ಕೊಳ್ತಿರೋ ವ್ಯಕ್ತಿ ಬೇರೆಯವನು ಅಂತಾ ನನಗೆ ಮಾಹಿತಿ ಬಂತು. ಇದರ ಮೇಲೆ ತನಿಖೆ ಮಾಡಲು ಹೇಳಿದ್ದೀನಿ. ಇಷ್ಟಕ್ಕೇ ನನ್ನ ಧ್ವನಿ ಮಾಡಿ ಆರೋಪ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
ತೆಲಂಗಾಣದಲ್ಲಿ ಅಮಿತ್ ಶಾ ಧ್ವನಿ ನಕಲಿ ಮಾಡಿದ್ದ ನಾಲ್ವರ ಬಂಧನ ಆಗಿದೆ. ಈಗಿನ ತಂತ್ರಜ್ಞಾನದಲ್ಲಿ ಏನು ಬೇಕಾದರೂ ಮಾಡಬಹುದು. ಈಗ ನನ್ನ ವಿರುದ್ಧ ಒಂದು ದೂರು ಕೊಟ್ಟು ಜೈಲಿಗೆ ಕಳಿಸೋದೇ ಅವರಿಗೆ ಬೇಕಿರೋದು. ಲೋಕಸಭೆ ಫಲಿತಾಂಶ ನಂತರ ನನಗೆ ಕೆಟ್ಟ ದಿನ ಬರುತ್ತೆ ಅಂತಾ ನನಗೆ ಗೊತ್ತಿದೆ. ಇದು ಜಂಟಿ ಕಾರ್ಯಾಚರಣೆ. ವಿಧಾನಸಭೆಯಲ್ಲಿ ಸೋತ ವ್ಯಕ್ತಿ, ಲೋಕಸಭೆಯಲ್ಲಿ ಸೋತ ವ್ಯಕ್ತಿ ಇವರಿಬ್ಬರ ಜಾಯಿಂಟ್ ಆಪರೇಷನ್ ಇದು. ಈ ಜಂಟಿ ಆಪರೇಷನ್‌ನಲ್ಲಿ ಚಲುವರಾಜ್ ನನ್ನ ಬಳಸಿಕೊಂಡಿದ್ದಾರೆ. ಒಕ್ಕಲಿಗರ ಮೇಲೆ ಇಲ್ಲಿಯವರೆಗೆ 20 ಜನರ ಮೇಲೆ ಅಟ್ರಾಸಿಟಿ ಕೇಸ್ ಹಾಕಿದವನು ಈಗ ನನ್ನ ಮೇಲೂ ಕೇಸ್ ಹಾಕಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಗಣೇಶನನ್ನು ಕಾಂಗ್ರೆಸ್ ಸರ್ಕಾರ ಪೊಲೀಸ್ ವ್ಯಾನ್ ಕಂಬಿ ಹಿಂದೆ ಹಾಕಿದೆ: ಮೋದಿ ವಾಗ್ದಾಳಿ
ದಲಿತ ಸಮಾಜದ ಜತೆಯಲ್ಲಿ ಇದ್ದವನನ್ನ ಬಳಸಿ ನನ್ನ ವಿರುದ್ಧ ಸಂಚು ಮಾಡಿದ್ದಾರೆ. ಒಕ್ಕಲಿಗ ಸಮುದಾಯದ ಮೇಲೆ ಕೆಟ್ಟ ಮಾತಾಡಿಲ್ಲ. ದಲಿತ ಸಮುದಾಯದ ಹೆಸರು ಬಳಕೆ ಮಾಡಿಲ್ಲ. ಇಲ್ಲಿಯವರೆಗೆ ಒಕ್ಕಲಿಗ, ದಲಿತರ ಸಮುದಾಯದ ಮೇಲೆ ಮಾತಾಡೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.