ಮೈಸೂರು: ಮದ್ಯ ವ್ಯಸನದಿಂದ ಮುಕ್ತನಾಗಲು ಬಂದು 37.90 ಲಕ್ಷ ರೂ. ವಂಚಿಸಿರುವ ಪ್ರಕರಣ ಮೈಸೂರಿನಲ್ಲಿ (Mysuru) ನಡೆದಿದೆ. ವ್ಯಸನ ಮುಕ್ತ ಕೇಂದ್ರದ ಮಾಲೀಕರ ಅಕೌಂಟ್ ಹ್ಯಾಕ್ ಮಾಡಿ ಹಣ ಎಗರಿಸಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಲಕ್ಷ ಲಕ್ಷ ವಂಚಿಸಿರುವ ಆರೋಪಿಯನ್ನು ಮಂಡ್ಯ ಮೂಲದ ವಿಶಾಲ್ ರಾಜ್ ಎಂದು ಗುರುತಿಸಲಾಗಿದೆ. ಆರೋಪಿ ಜೂ.17 ರಿಂದ ಜು.24ರ ವರೆಗೆ ನಿರಂತರವಾಗಿ 37.90 ಲಕ್ಷ ರೂ. ಹಣವನ್ನು (Money) ವರ್ಗಾವಣೆ ಮಾಡಿದ್ದಾನೆ. ಅನುಮಾನ ಬಂದು ಅಕೌಂಟ್ ಪರಿಶೀಲಿಸಿದ ವೇಳೆ ವಂಚನೆ ಬೆಳಕಿಗೆ ಬಂದಿದೆ. ಸಂಸ್ಥೆಯ ಹಳೆ ಅಕೌಂಟೆಂಟ್ ಗೋಕುಲ್ ರಾಜ್‍ನಿಂದ ನೆರವು ಪಡೆದು ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ
ಆತ 2022 ರಲ್ಲಿ ಮದ್ಯ ವ್ಯಸನದಿಂದ ಮುಕ್ತನಾಗಲು ಮೈಸೂರಿನ ವ್ಯಸನ ಮುಕ್ತ ಕೇಂದ್ರಕ್ಕೆ ಬಂದಿದ್ದ. ಬಳಿಕ ಆತ ಮದ್ಯವನ್ನು ತ್ಯಜಿಸಿದ್ದ. ಇದಾದ ನಂತರ ಅಲ್ಲಿಯೇ ಕೆಲಸಕ್ಕೆ ಸೇರಿಕೊಂಡಿದ್ದ. ಆತನನ್ನು ಅಕೌಂಟೆಟ್ ಆಗಿ ನೇಮಿಸಲಾಗಿತ್ತು ಎಂದು ತಿಳಿದು ಬಂದಿದೆ.
ಈ ಸಂಬಂಧ ಹೆಬ್ಬಾಳು ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಿಶಾಲ್ ರಾಜ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಪುತ್ರನ ವ್ಹೀಲಿಂಗ್ ಪುಂಡಾಟಕ್ಕೆ ವೃದ್ಧ ಬಲಿ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]