ಏಳನೇ ಮಗುವಿಗೆ ತಂದೆಯಾದ 79ನೇ ವಯಸ್ಸಿನ ಹೀರೋ

Public TV
1 Min Read
Robert De Niro actor 1

ಬೆಳ್ಳಿ ಪರದೆಯ ಮೇಲೆ ಏನೆಲ್ಲ ಅಚ್ಚರಿಗಳು ನಡೆಯುತ್ತವೆ. ಅದು ಸಹಜ ಕೂಡ. ಆದರೆ, ನಿಜ ಜೀವನದಲ್ಲೂ ಅಂಥದ್ದೊಂದು ಅಚ್ಚರಿ ಸುದ್ದಿಯನ್ನು ನೀಡಿದ್ದಾರೆ. ಹಾಲಿವುಡ್ ನಟ ರಾಬರ್ಡ್ ಡಿನೆರೋ. ತಮ್ಮ 79ನೇ ವಯಸ್ಸಿನಲ್ಲಿ ಏಳನೇ ಮಗುವಿಗೆ ತಂದೆಯಾಗಿದ್ದಾರೆ. ಈ ಸುದ್ದಿಯನ್ನು ಸ್ವತಃ ಅವರು ಬಹಿರಂಗಪಡಿಸಿದ್ದಾರೆ.

Robert De Niro actor 2

ಕಳೆದ ಆರು ದಶಕಗಳಿಂದ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದಾರೆ ರಾಬರ್ಟ್ ಡಿನೆರೋ. ವೈಸ್ ಗಯ್ಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಸಿನಿಮಾವೊಂದರ ಪ್ರಚಾರದ ವೇಳೆ ಮಾತನಾಡಿರುವ ಅವರು ಏಳನೇ ಮಗುವಿನ ವಿಚಾರವಾಗಿ ಮಾತನಾಡಿದ್ದಾರೆ. ಸಂದರ್ಶಕರು ನಿಮಗೆ ಆರು ಮಕ್ಕಳು ಅಲ್ಲವೆ? ಎನ್ನುವ ಪ್ರಶ್ನೆಗೆ ಅಲ್ಲ ಏಳು ಎಂದು ಹೇಳುವ ಮೂಲಕ ನಿರೂಪಕರನ್ನೇ ಬೆಚ್ಚಿಬೀಳಿಸಿದ್ದಾರೆ. ಇದನ್ನೂ ಓದಿ:ಹೈದರಾಬಾದ್‌ನಲ್ಲಿ ಐಷಾರಾಮಿ ಮನೆ ಖರೀದಿಸಿದ ನಟಿ ಸಮಂತಾ

Robert De Niro actor 3

ರಾಬರ್ಟ್ ಡಿನೆರೋಗೆ ಇಬ್ಬರು ಪತ್ನಿಯರು ಹಾಗೂ ಮಾಡೆಲ್ ವೊಬ್ಬರ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ. ಇಬ್ಬರು ಪತ್ನಿಯರಿಗೆ ತಲಾ ಎರಡು ಮಕ್ಕಳು. ಮಾಡೆಲ್ ಜೊತೆ ಅವಳಿ ಮಕ್ಕಳಿಗೆ ತಂದೆಯಾಗಿದ್ದಾರೆ. ಅಲ್ಲದೇ, ಏಳನೇ ಮಗುವಿನ ತಾಯಿ ಯಾರು ಎನ್ನುವುದನ್ನು ಅವರು ಬಹಿರಂಗ ಪಡಿಸಿಲ್ಲ. ಇಬ್ಬರು ಪತ್ನಿಯರಿಗೆ ವಿಚ್ಚೇದನ ನೀಡಿದ್ದ ಅವರು ಮಾಡೆಲ್ ಜೊತೆ ಸಹಜೀವನ ನಡೆಸುತ್ತಿದ್ದರು.

Share This Article