ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತದ ವಾಯುಸೇನೆ ಪಾಕಿಸ್ತಾನದ ಉಗ್ರರ ತರಬೇತಿ ಶಿಬಿರದ ದಾಳಿ ನಡೆಸಿದೆ. ಇಂದು ಬೆಳಗಿನ ಜಾವ ಮೂರು ಶಿಬಿರಗಳ ಮೇಲೆ ದಾಳಿ ನಡೆಸಿದೆ. ಉರಿ ದಾಳಿ ನಡೆದ ಬಳಿಕ ಭಾರತ ಭೂಸೇನೆಯನ್ನು ನಡೆಸಿ ಸರ್ಜಿಕಲ್ ನಡೆಸಿದರೆ ಈ ಬಾರಿ ಭಾರತ ವಾಯುಸೇನೆಯನ್ನು ಬಳಸಿ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದೆ.
1. ಗ್ವಾಲಿಯರ್ ನಿಂದ ಹೊರಟ 12 ಮಿರಾಜ್-2000 ಯುದ್ಧ ವಿಮಾನಗಳು (Mirage 2000) -ಈ ವಿಮಾನಗಳು ಹಲವು ರೀತಿಯಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದ್ದು, ಡಸಾಲ್ಟ್ ಏವಿಯೇಷನ್ ಈ ಜೆಟ್ ನ್ನು ನಿರ್ಮಾಣ ಮಾಡಿದ್ದು, 1980ರಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡಿದೆ. ಪಂಜಾಬ್ ನ ಭಟಿಂಡಾದಲ್ಲಿ ಮಿರಾಜ್ ಯುದ್ಧ ವಿಮಾನದ ಮೂಲಕ ಮೊದಲು ವಾಯು ಸೇನೆ ಟ್ರಯಲ್ ನೋಡಿತ್ತು. ಬಳಿಕ ಮಿರಾಜ್ ಯುದ್ಧ ವಿಮಾನಗಳು ಆಗ್ರಾದಲ್ಲಿ ಇಂಧನ ತುಂಬಿಸಿಕೊಂಡಿದ್ದವು. ಮಿರಾಜ್-2000 ವಿಮಾನವು ಗ್ವಾಲಿಯಾರ್ ನಿಂದ ಟೇಕಾಫ್ ಆಗಿತ್ತು. ಈ ಯುದ್ಧ ವಿಮಾನಗಳು 1000 ಕೆ.ಜಿ ತೂಕದ 10 ಲೇಸರ್ ಗೈಡೆಡ್ ಬಾಂಬ್‍ಗಳಿಂದ ತುಂಬಿದ್ದವು.
Advertisement
Advertisement
2. ಅಮೆರಿಕ ನಿರ್ಮಿತ ಲೇಸರ್ ಗೈಡೆಡ್ ಬಾಂಬ್ ಜಿಬಿಯು-12 (GBU-12 Paveway Laser Guided Bomb): ನಿರ್ಧಿಷ್ಟ ಗುರಿಯನ್ನು ತಲುಪಲು ಭಾರತ ಈ ಬಾಂಬ್ ಬಳಕೆ ಮಾಡಿದೆ. ಇದನ್ನೂ ಓದಿ: ಪಾಕ್‍ನ 3 ಉಗ್ರರ ಕೇಂದ್ರಗಳು ಉಡೀಸ್- ಭಾರತದ ಬಾಂಬ್ ದಾಳಿಯ ಪ್ಲಾನ್ ಹೀಗಿತ್ತು
Advertisement
Advertisement
3. ಮಾಟ್ರಾ ಮ್ಯಾಜಿಕ್ ಕ್ಲೋಸ್ ಕಂಬ್ಯಾಟ್ ಮಿಸೈಲ್ (Matra Magic Close Combat Missile)- ಪಾಕ್ ವಾಯುಸೇನೆಯಿಂದ ಪ್ರತಿದಾಳಿಯಾದ್ರೆ ಅಪ್ಪಳಿಸಲು ಸಿದ್ಧವಾಗಿದ್ದ ಫ್ರಾನ್ಸ್ ನಿರ್ಮಿತ ಕ್ಷಿಪಣಿ ಇದನ್ನೂ ಓದಿ: ಯಾವುದೇ ಹಾನಿಯಾಗಿಲ್ಲ, ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ರು: ಪಾಕಿಸ್ತಾನ ಮೊಂಡುವಾದ
4. ಲೈಟ್‍ನಿಂಗ್ ಪಾಡ್ (Litening POD)- ನಿರ್ದಿಷ್ಟ ಗುರಿಗಳನ್ನು ಟಾರ್ಗೆಟ್ ಮಾಡಲು ಬಳಸುವ ತಂತ್ರಜ್ಞಾನ ಇದನ್ನೂ ಓದಿ:ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ ಸೇನೆ!
5. ನೇತ್ರಾ (Netra Airborne Early Warning Jet)- ಡಿಆರ್ ಡಿಒ ನಿರ್ಮಿಸಿದ ನೇತ್ರಾ ವಿಮಾನವನ್ನು ಈ ಬಾರಿಯ ಕಾರ್ಯಾಚರಣೆಗೆ ಬಳಕೆ ಮಾಡಿದೆ. ದಾಳಿ ನಡೆಸುವ ವಿಮಾನಕ್ಕೆ ಎಲ್ಲಿ ದಾಳಿ ನಡೆಸಬೇಕು ಎನ್ನುವ ನಿಖರ ಮಾಹಿತಿಯನ್ನು ಈ ವಿಮಾನಲ್ಲಿರುವ ವ್ಯವಸ್ಥೆ ನೀಡುತ್ತದೆ. ರೇಡಾರ್ ಗಳನ್ನು ಸ್ಕ್ಯಾನ್ ಮಾಡಿ ಪ್ರತಿ ದಾಳಿ ಹೇಗೆ ನಡೆಸಬೇಕು ಎನ್ನುವ ಮಾಹಿತಿಯನ್ನು ನೇತ್ರಾ ನೀಡುತ್ತದೆ. ಇದನ್ನೂ ಓದಿ: ಭಾರತದ ಬಾಂಬ್ ದಾಳಿಗೆ ಜೈಷ್ ಉಗ್ರರ ಅತಿ ದೊಡ್ಡ ಕ್ಯಾಂಪ್ ಧ್ವಂಸ
6. ಇಲ್ಯೂಷನ್ 78ಎಂ (Ilyushin-78 M) – ರಷ್ಯಾ ನಿರ್ಮಿತ ಈ ವಿಮಾನ ಇಂಧನ ಟ್ಯಾಂಕ್ ಆಗಿ ಬಳಕೆಯಾಗುತ್ತದೆ. ಕಾರ್ಯಾಚರಣೆ ಗುಪ್ತವಾಗಿ ನಡೆಯಲು ಆಗ್ರಾ ವಾಯುನೆಯಲ್ಲಿ ಇಂಧನ ತುಂಬಿಸಿದ್ದ ಇಲ್ಯೂಷನ್ ಮಿರಾಜ್ ಯುದ್ಧ ವಿಮಾನಗಳಿಗೆ ಆಕಾಶದಲ್ಲೇ ಇಂಧನವನ್ನು ತುಂಬಿಸಿತ್ತು.
7. ಹೆರಾನ್ (Heron Drone) – ಫೆ. 16ರಿಂದ 20 ರವರೆಗೆ ಉಗ್ರರ ಕೇಂದ್ರ ಸ್ಥಳಗಳನ್ನು ಪತ್ತೆ ಹಚ್ಚಲು ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭೂಸೇನೆ ಮತ್ತು ವಾಯುಸೇನೆ 4 ದಿನ ವೈಮಾನಿಕ ಸಮೀಕ್ಷೆ ನಡೆಸಿತ್ತು. ಇಸ್ರೇಲ್ ನಿರ್ಮಿತ ಹೆರಾನ್ ಹೆಸರಿನ ಮಾನವರಹಿತ ವೈಮಾನಿಕ ಸರ್ವೇಕ್ಷಣಾ ವಾಹನ ಬಳಸಿ ಈ ಸರ್ವೆ ಮಾಡಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv