ಗದಗ: ಎಬಿವಿಪಿನಲ್ಲಿದ್ದ 6 ಮಂದಿ ಹಿಜಬ್ ಧರಿಸಿದವರು ಈಗ ಸಿಎಫ್‍ಐಗೆ ಬಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಹಿಜಾಬ್ ಮತ್ತು ಕೇಸರಿ ವರ್ಸಸ್ ಶಾಲು ವಿವಾದ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ಸಂವಿಧಾನ ಇದೆ, ಅದೇ ನಮ್ಮ ಧರ್ಮವಾಗಿದೆ. ರಾಷ್ಟ್ರಧ್ವಜವೇ ನಮ್ಮ ಧರ್ಮ ನಾವೂ ಹಿಂದೂಗಳೇ ಎಂದರು.
Advertisement
Advertisement
ಇದೇ ವೇಳೆ ಹಿಜಬ್ ವಿವಾದದಲ್ಲಿ ಕಾಂಗ್ರೆಸ್ ಸಾಫ್ಟ್ ಕಾರ್ನರ್ ಆರೋಪಕ್ಕೆ ಪ್ರತಿಕ್ರಿಯಿಸಿ, ಹಿಜಬ್ ವಿಚಾರವನ್ನು ನಾವು ಮಾತನಾಡೋದಿಲ್ಲ. ಹಿಂದುಳಿದವರ ಕುರಿತು ನಾವು ಮಾತನಾಡೋದಿಲ್ಲ. ಮೈನಾರಿಟಿಸ್ ನಾವು ಮೊದಲಿನಿಂದಲೂ ರಕ್ಷಣೆ ಮಾಡುತ್ತಾ ಬಂದಿದ್ದೇವೆ ಮುಂದಕ್ಕೂ ಮಾಡುತ್ತೇವೆ ಎಂದು ಹೇಳಿದರು.
Advertisement
Advertisement
ಹಿಜಬ್ ಕುರಿತು ವಿದ್ಯಾರ್ಥಿಗಳು ಟ್ವಿಟ್ಟರ್ ಫ್ರೀ ಪ್ಲಾನ್ ವಿಚಾರದ ಕುರಿತು ಮಾತನಾಡಿ, 6 ಜನ ಹಿಜಬ್ ವಿದ್ಯಾರ್ಥಿನಿಯರು ಎಪಿವಿಬಿ ನಲ್ಲಿದ್ದರು. ಅದೇ ಹೆಣ್ಣು ಮಕ್ಕಳು ಈಗ ಸಿಎಫ್‍ಐ ಗೆ ಬಂದಿದ್ದಾರೆ. ಯಾರಿಗೆ ಯಾರ ಜೊತೆ ಸಂಪರ್ಕ ಇದೆ, ಎಪಿವಿಬಿನಲ್ಲಿ ಯಾವಾಗ ಇದು, ಅದೆಲ್ಲವನ್ನೂ ಸರ್ಕಾರ ನೋಡಿಕೊಳ್ಳಲಿ ಎಂದು ತಿಳಿಸಿದರು. ಇದನ್ನೂ ಓದಿ: ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಬ್ ಧರಿಸುತ್ತಿದ್ದಾರೆ: ಜಮೀರ್ ಅಹ್ಮದ್
ವಿದ್ಯಾರ್ಥಿಗಳ ಟ್ವೀಟ್ ಬಗ್ಗೆ ಸರ್ಕಾರ ನೋಡಿಕೊಳ್ಳಲಿ. ಅವರ ಭಾವನೆ ಅವರ ವಿಚಾರ ಅವರು ಮಾತನಾಡೋದಕ್ಕೆ ನಾವು ಜವಾಬ್ದಾರರಲ್ಲ. ನಮ್ಮ ಸರ್ಕಾರ ಇದ್ದಿದ್ರೆ ನಾನು ರಿಯಾಕ್ಟ್ ಮಾಡ್ತಿದ್ದೆ. ಸರ್ಕಾರವೇ ಈ ವಿವಾದಕ್ಕೆ ಪ್ರೋತ್ಸಾಹ ನೀಡಿದೆ. ಪ್ರಾರಂಭದಲ್ಲೇ ನಿಯಂತ್ರಣ ಮಾಡಬಹುದಿತ್ತು. ಇದಕ್ಕೆ ಸರ್ಕಾರವೇ ಹೊಣೆ ಎಂದು ಡಿಕೆಶಿ ಕಿಡಿಕಾರಿದರು.