ಐದು ಕಥೆಗಳನ್ನು ಒಳಗೊಂಡ, ಐವರು ನಿರ್ದೇಶಕರು ನಿರ್ದೇಶನ ಮಾಡಿರುವ ಪೆಂಟಗನ್ (Pentagon) ಸಿನಿಮಾದ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸಾಕಷ್ಟು ಚರ್ಚೆ ಆಗಿದೆ. ಈಗಾಗಲೇ ಈ ಸಂಕಲನದ ಫಸ್ಟ್ ಲುಕ್, ಮೋಷನ್ ಪೋಸ್ಟರ್ ಗಳು ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆದಿವೆ. ಇದೀಗ ಈ ಚಿದ್ರದಲ್ಲಿನ ಐದನೇ ಕಥೆಯ ಟೀಸರ್ (Teaser) ಅನ್ನು ಜನವರಿ 18 ರಂದು ಸಂಜೆ 6.04ಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಪೆಂಟಗನ್ ಸಿನಿಮಾದ ಈ ಕಥೆಯಲ್ಲಿ ಕನ್ನಡ ಹೋರಾಟಗಾರನೊಬ್ಬನ ವಿರೋಧಾಭಾಸ ಜೀವನವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಹಾಗಾಗಿ ಈ ಸಿನಿಮಾದೊಳಗಿನ ಈ ಕತೆಯು ಅತ್ಯಂತ ಕುತೂಹಲ ಮೂಡಿಸುವಂಥದ್ದು.
Advertisement
ಗುರು ದೇಶಪಾಂಡೆ (Guru Deshpande) ನಿರ್ದೇಶನದಲ್ಲಿ ಈ ಅಧ್ಯಾಯದ ಮುಖ್ಯ ಭೂಮಿಕೆಯಲ್ಲಿ ಕಿಶೋರ್ (Kishor) ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಪೃಥ್ವಿ ಅಂಬರ್ (Prithvi Amber), ರೂಪೇಶ್ ರಾಜಣ್ಣ(Rupesh Rajanna), ಅಶ್ವಿನಿ ಗೌಡ ಸೇರಿದಂತೆ ಹಲವು ಅನುಭವಿ ಕಲಾವಿದರು ಇದ್ದಾರೆ. ಇದು ಕನ್ನಡಪರ ಹೋರಾಟಗಾರನೊಬ್ಬನ ಕಥೆಯೂ ಆಗಿರುವುದರಿಂದ ಕನ್ನಡ ಸಂಘಟನೆಗಳ ಸದಸ್ಯರನ್ನೂ ಈ ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ ನಿರ್ದೇಶಕರು. ಇದನ್ನೂ ಓದಿ: ಸಚಿವ ಸುಧಾಕರ್ರನ್ನ ಹಾಡಿ ಹೊಗಳಿದ ರಮ್ಯಾ: ಕೈಗೆ ನಟಿ ಬೈ ಹೇಳಿ ಬಿಜೆಪಿ ಸೇರ್ಪಡೆ?
Advertisement
Advertisement
ಈ ಕುರಿತು ನಿರ್ದೇಶಕ ಗುರು ದೇಶಪಾಂಡೆ, “ಈ ಕಥೆಯು ಕನ್ನಡದ ಹೋರಾಟಗಾರನೊಬ್ಬನ ಕುರಿತಾಗಿದ್ದು, ಅವನ ವ್ಯಕ್ತಿತ್ವವನ್ನು ವೈಭವೀಕರಿಸದೇ ಅಥವಾ ಅವನ ಕ್ರಿಯಾಶೀಲತೆಯ ಬಗ್ಗೆ ನಕಾರಾತ್ಮಕವಾಗಿ ಹೇಳದೇ, ಹೋರಾಟಗಾರನೊಬ್ಬನ ಒಳತುಮುಲು ಹಾಗೂ ಅವನ ಜೀವನ ಸುತ್ತ ನಡೆಯುವ ಘಟನೆಗಳನ್ನು ತೋರಿಸಲಾಗಿದೆ. ಇದೊಂದು ಸೂಕ್ಷ್ಮ ರೀತಿಯ ಕಥೆಯಾಗಿದ್ದು, ಅದನ್ನು ಅಷ್ಟೇ ನಾಜೂಕಾಗಿ ಹಿಡಿದಿಡುವ ಪ್ರಯತ್ನ ಮಾಡಿದ್ದೇವೆ. ಹೋರಾಟಗಾರನೊಬ್ಬನ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ಚರ್ಚಿಸುತ್ತಲೇ, ಹೋರಾಟಗಾರರ ಮೇಲಿನ ಹಲವು ಅನುಮಾನಗಳನ್ನು ನಿವಾರಿಸುವ ಪ್ರಯತ್ನವನ್ನು ಮಾಡಲಾಗಿದೆ,” ಎನ್ನುತ್ತಾರೆ.
Advertisement
ಈ ಅಧ್ಯಾಯಕ್ಕೆ ಅಭಿಲಾಷ್ ಕಲ್ಲಟ್ಟಿ ಸಿನಿಮಾಟೋಗ್ರಫಿ ಮಾಡಿದ್ದು, ಮಣಿಕಾಂತ್ ಕದ್ರಿ ಅವರ ಸಂಗೀತ ಸಂಯೋಜನೆಯಿದೆ. ಪೆಂಟಗನ್ ಸಿನಿಮಾದಲ್ಲಿ ಒಟ್ಟು ಐದು ಕಥೆಗಳಿದ್ದು, ಆಕಾಶ್ ಶ್ರೀವತ್ಸ (ಶಿವಾಜಿ ಸುರತ್ಕಲ್) ಚಂದ್ರಮೋಹನ್ (ಬ್ರಹ್ಮಚಾರಿ), ರಾಘು ಶಿವಮೊಗ್ಗ (ಚೂರಿಕಟ್ಟೆ), ಕಿರಣ್ ಕುಮಾರ್ (Debut) ಹಾಗೂ ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಜಿ ಸಿನಿಮಾಸ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಈ ಸಿನಿಮಾಗೆ ಕ್ರಿಯೇಟಿವ್ ಹೆಡ್ ಮತ್ತು ನಿರ್ಮಾಪಕರು ಗುರು ದೇಶಪಾಂಡೆ.
ತಮ್ಮ ಬ್ಯಾನರ್ ಅಡಿಯಲ್ಲಿ ಈಗಾಗಲೇ ಅನೇಕ ನಿರ್ದೇಶಕರನ್ನು ಪರಿಚಯಿಸಿರುವ ಗುರು ದೇಶಪಾಂಡೆ, ಜಂಟಲ್ ಮನ್ ಮೂಲಕ ಜಡೇಶ್ ಹಂಪಿ, ಲವ್ ಯೂ ರಚ್ಚು ಮೂಲಕ ಶಂಕರ್ ಅವರನ್ನು ಸಿನಿಮಾ ರಂಗಕ್ಕೆ ನಿರ್ದೇಶಕರಾಗಿ ಪರಿಚಯಿಸಿದ್ದಾರೆ. ರಾಜಾ ಹುಲಿ ಹಾಗೂ ಜಾನ್ ಜಾನಿ ಜನಾರ್ದನ್ ಗಳಂತ ಚಿತ್ರಗಳ ನಿರ್ದೇಶಕರಾದ ಗುರು ದೇಶಪಾಂಡೆ ಮೂರು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.
ತಮ್ಮ ಬ್ಯಾನರ್ ಬಗ್ಗೆ ಗುರು ದೇಶಪಾಂಡೆ, “ನಮ್ಮ ಜಿ ಸಿನಿಮಾಸ್ ಕೇವಲ ಮನರಂಜನೆಯ ಸಿನಿಮಾಗಳನ್ನು ಮಾತ್ರ ಮಾಡದೇ, ಚಿಂತನೆ- ಪ್ರಚೋದನೆ ಹಾಗೂ ಪ್ರಚಲಿತ ವಿಷಯಗಳನ್ನು ಸಿನಿಮಾವಾಗಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ಹಲವು ನಿರ್ದೇಶಕರನ್ನು, ತಂತ್ರಜ್ಞರನ್ನು ಮತ್ತು ಹೊಸ ಹೊಸ ಕಲಾವಿದರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದೆ. ಪೆಂಟಗನ್ ಸಿನಿಮಾದಲ್ಲೂ ಇದನ್ನು ಮುಂದುವರೆಸಿದೆ,” ಎನ್ನುತ್ತಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k