ಬೆಂಗಳೂರು: ರಾಜ್ಯದಲ್ಲಿ 2ನೇ ದಿನದ ವೀಕೆಂಡ್ ಕರ್ಫ್ಯೂ ಬಹುತೇಕ ಯಶಸ್ವಿ ಆಗಿದೆ. ಬೆಂಗಳೂರು ಹೆಚ್ಚು ಕಡಿಮೆ ಸ್ತಬ್ಧವಾಗಿತ್ತು. ಆದರೆ ಭಾನುವಾರ ಅಂತ ಚಿಕನ್, ಮಟನ್ ಮಾರ್ಕೆಟ್, ತರಕಾರಿ, ದಿನಸಿ ಅಂಗಡಿಗಳ ಮುಂದೆ ಜನಕಂಡು ಬಂದ್ರು.
Advertisement
ಬಸ್ ಕೊರತೆ ಕಾರಣ ರೈಲ್ವೇ ಸ್ಟೇಷನ್‍ನಲ್ಲಿ ಎಂದಿಗಿಂತ ಜನ ಜಾಸ್ತಿ ಇದ್ರು. ಕೂಲಿಕಾರ್ಮಿಕರು ಗಂಟು ಮೂಟೆ ಸಮೇತ ಊರಿಗೆ ಹೊರಟು ನಿಂತಿದ್ರು. ಅನಗತ್ಯವಾಗಿ ಓಡಾಡ್ತಿದ್ದ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ರು. ಕೋಳಿ ಖರೀದಿಗೆ ಬೈಕ್‍ನಲ್ಲಿ ಬಂದಿದ್ದ ಯುವಕರು ಲಾಕ್ ಆದರು. ಇದನ್ನೂ ಓದಿ: ಪ್ರಧಾನಿ ಭದ್ರತೆ ವಿಚಾರದಲ್ಲಿ ಅವರಿಗೇಕೆ ಮಾಹಿತಿ ನೀಡಬೇಕು? – ಚರಣ್‍ಜಿತ್ ಸಿಂಗ್ ಚನ್ನಿ ವಿರುದ್ಧ ಬಿಜೆಪಿ ಕಿಡಿ
Advertisement
Advertisement
ಬೈಕ್ ಕೂಡ ಸೀಜ್ ಆಯ್ತು. ನೃಪತುಂಗ ರಸ್ತೆಯಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಪಾಸ್ ಇಟ್ಕೊಂಡು ಓಡಾಡ್ತಿದ್ದ ಕಾರನ್ನು ಪೊಲೀಸರು ತಡೆದ್ರು. ಆಸ್ಪತ್ರೆಗೆ ಹೋಗ್ತಾ ಇದ್ದೀವಿ ಅಂತ ಹೇಳ್ತಿದ್ದಂತೆ ಬಿಟ್ಟು ಕಳಿಸಿದ್ರು. ರಾಯಚೂರಲ್ಲಿ ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ರು. ಜನ ದಿಕ್ಕೆಟ್ಟು ಓಡಿದ್ರು. ರಾಣೆಬೆನ್ನೂರಿನಲ್ಲಿ ಜಾನುವಾರು ಸಂತೆ ನಡೀತು. ಬೆಳಗಾವಿ ಮಾರ್ಕೆಟ್ ರಷ್ ಆಗಿತ್ತು.
Advertisement
ಗಂಗಾವತಿಯಲ್ಲಿ ವೀಕೆಂಡ್ ಕರ್ಫ್ಯೂ ಇಲ್ಲ ಎಂಬಂತಹ ವಾತಾವರಣ ಇತ್ತು. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾಗಿದ್ರು. ಮೈಸೂರಿನಲ್ಲಿ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ವು. ಕೆಲವೆಡೆ ಪೊಲೀಸರು ವಾಹನ ತಪಾಸಣೆ ನಡೆಸಿದ್ರು. ಕಾಂಗ್ರೆಸ್ ಪಾದಯಾತ್ರೆ ಪ್ರಸ್ತಾಪಿಸಿದ ರಾಯಚೂರು ಮಂದಿ, ರಾಜಕಾರಣಿಗಳಿಗೆ ಒಂದು ರೂಲ್ಸ್, ನಮಗೊಂದು ರೂಲ್ಸಾ ಅಂತಾ ಆಕ್ರೋಶ ಹೊರಹಾಕಿದ್ರು.