ಬೆಳಗಾವಿ: 1974 ರಲ್ಲಿ ಜಾರಿಗೆ ತಂದಿರುವ ವಕ್ಫ್ ಕಾನೂನು (Waqf Law) ಮುಸ್ಲಿಮರಿಗೆ (Muslims) ಹೇಳಿ ಮಾಡಿಸಿದ ಕಾಯ್ದೆಯಾಗಿದೆ. ಇದನ್ನು ತಕ್ಷಣವೇ ರದ್ದು ಮಾಡಬೇಕೆಂದು ಬೆಳಗಾವಿಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ (Murugesh Nirani) ಆಗ್ರಹಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕಾನೂನು ಜಾರಿಯಾದ 50 ವರ್ಷದ ನಂತರ ರೈತರ ಭೂಮಿಯನ್ನು ಕಬಳಿಕೆ ಮಾಡಲಾಗುತ್ತಿದೆ. ವಕ್ಫ್ ಬೋರ್ಡ್ (Waqf Board) ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತಿದೆ. ಪಹಣಿ ಪತ್ರದ 9 ಹಾಗೂ 11 ನೇ ಕಾಲಂ ತಕ್ಷಣವೇ ರದ್ದು ಮಾಡಬೇಕು ಎಂದರು. ಇದನ್ನೂ ಓದಿ: Gadaga| ಮಠದ 11 ಎಕ್ರೆಗೆ ಕನ್ನ – ಪ್ರಸಾದ ನಿಲಯ ಈಗ ‘ವಕ್ಫ್’ ಆಸ್ತಿ
- Advertisement -
ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದು ಆಗಿದೆ. ಪಹಣಿ ಪತ್ರದಲ್ಲಿ ಬೇರೆಯವರ ಹೆಸರು ಬರದಂತೆ ರೈತರು ನೋಡಿಕೊಳ್ಳಬೇಕು ಮಾಡಬೇಕು.ಇಡೀ ರಾಜ್ಯದ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ವಕ್ಫ್ ಬೋರ್ಡ್‌ನವರು ಮುಂದೆ ವಿಧಾನಸೌಧ, ಪಾರ್ಲಿಮೆಂಟ್, ಮಠಗಳು ನಮ್ಮದೇ ಎನ್ನುತ್ತಾರೆ ಎಂದರು.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ಭೂಕಬಳಿಕೆ ಮಾಡ್ತಿದ್ದಾರೆ. ಸಿಎಂ ಆದೇಶದ ಮೇರೆಗೆ ಈ ರೀತಿ ಮಾಡಲಾಗ್ತಿದೆ ಎಂದು ಸ್ವತಃ ಜಮೀರ್ ಹೇಳಿದ್ದಾರೆ. ವಕ್ಫ್ ಬೋರ್ಡ್‌ಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಹಿಂದೂಗಳ ಆಸ್ತಿ ಉಳಿಸಲು ಕೇಂದ್ರ ಕ್ರಮ ವಹಿಸಿದೆ ಎಂದು ನಿರಾಣಿ ಹೇಳಿದರು.