ಬೆಂಗಳೂರು: ರೈಲಲ್ಲಿ ಊರಿಗೆ ಹೊರಟ್ಟಿದ್ದ ಪಬ್‌ಜಿ ಪಾರ್ಟ್ನರ್‌ಗಾಗಿ ಬಾಲಕನೊಬ್ಬ ಹುಸಿ ಬಾಂಬ್ ಕರೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
12 ವರ್ಷದ ಬಾಲಕನ ಸ್ನೇಹಿತ ಯಲಹಂಕದಿಂದ ಕಾಚಿಗುಡ ಎಕ್ಸ್‌ಪ್ರೆಸ್‌ನಲ್ಲಿ ತೆರಳಬೇಕಿತ್ತು. ಆದರೆ ಸ್ನೇಹಿತ ಹೋದರೆ ತನಗೆ ಪಬ್ ಜಿ ಪಾರ್ಟ್ನರ್ ಇರುವುದಿಲ್ಲವೆಂದು ರೈಲ್ವೇ ಸಹಯವಾಣಿಗೆ ಕರೆ ಮಾಡಿ, ರೈಲಿನಲ್ಲಿ ಬಾಂಬ್ ಇರೋದಾಗಿ ಸುಳ್ಳು ಹೇಳಿದ್ದಾನೆ. ಇದರಿಂದ ಪೊಲೀಸರು ಬಾಂಬ್‍ಗಾಗಿ ಸುಮಾರು 90 ನಿಮಿಷಗಳ ಕಾಲ ರೈಲಿನ ಪೂರ್ತಿ ಹುಡುಕಾಡಿದ್ದಾರೆ. ಕೊನೆಗೆ ಇದು ಹುಸಿ ಕರೆ ಎಂಬುದು ಸ್ಪಷ್ಟವಾಗಿದೆ. ಇದನ್ನೂ ಓದಿ: ರಾಜ್ ಠಾಕ್ರೆ ಮನೆಗೆ ಭೇಟಿ ನೀಡಿದ ನಿತಿನ್ ಗಡ್ಕರಿ – ಉದ್ದೇಶವೇನು?
ನಟಡೆದಿದ್ದೇನು?
ಮಾರ್ಚ್ 30ರಂದು ಬಾಲಕ ತನ್ನ ಸ್ನೇಹಿತ ರೈಲಿನಲ್ಲಿ ಹೋದರೆ ಪಬ್‌ಜಿ ಪಾರ್ಟ್ನರ್ ಇರುವುದಿಲ್ಲವೆಂದು ಯಲಹಂಕ ರೈಲ್ವೇ ಸಹಯವಾಣಿಗೆ ಹುಸಿ ಕರೆ ಮಾಡಿದ್ದಾನೆ. ಈ ಕರೆಯಲ್ಲಿ ಬಾಲಕ ಯಲಹಂಕದಿಂದ ಕಾಚಿಗುಡ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇರೋದಾಗಿ ಹೇಳಿದ್ದಾನೆ.
ಈ ಒಂದು ಸುಳ್ಳು ಕರೆಯಿಂದ 90 ನಿಮಿಷಗಳ ಕಾಲ ರೈಲಿನಲ್ಲಿ ಪೊಲೀಸರು ಬಾಂಬ್‍ಗಾಗಿ ತಡಕಾಡಿದ್ದಾರೆ. ಒಂದುವರೆ ಎರಡು ಗಂಟೆ ರೈಲು ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಆದರೆ ಎಷ್ಟೇ ತಡಕಾಡಿದ್ರು ಮಾಹಿತಿ ಸಿಗದ ಹಿನ್ನಲೆ ಇದೊಂದು ಹುಸಿ ಕರೆ ಎಂದು ಪೊಲೀಸರಿಗೆ ಖಾತರಿಯಾಗುತ್ತೆ. ಹುಸಿ ಕರೆಯ ಬೆನ್ನು ಹತ್ತಿದ ಪೊಲೀಸರಿಗೆ ಬಾಗಲೂರು ವಿನಾಯಕ ನಗರದಿಂದ ಕರೆ ಬಂದಿರುವುದು ತಿಳಿದುಬರುತ್ತೆ. ಈ ಹಿನ್ನೆಲೆ ಪೊಲೀಸರು ಪರಿಶೀಲನೆ ಮಾಡಿದಾಗ ಬಾಲಕನೊಬ್ಬ ಕರೆ ಮಾಡಿರೊದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸೌದಿ ಮಿನಿಸ್ಟರ್ ಜೊತೆ ಔತಣ ಸವಿದ ಶಾರೂಖ್, ಸಲ್ಮಾನ್, ಅಕ್ಷಯ್ – ಅಸಲಿ ಕಾರಣವೇನು
ಬಾಲಕನ್ನ ವಿಚಾರಿಸಿದಾಗ ಪಬ್ ಜಿ ಕಥೆ ಹೇಳಿದ್ದಾನೆ. ಅಪ್ರಾಪ್ತ ಬಾಲಕನಾದ್ದರಿಂದ ಪ್ರಕರಣ ದಾಖಲಿಸದೇ ಪೋಷಕರನ್ನ ಕರೆದು ಬುದ್ದಿ ಹೇಳಿ ಕಳಿಸಿಕೊಟ್ಟಿದ್ದಾರೆ.