ತಿಂಗಳಾದ್ರೂ ಶಾಲಾ ಆವರಣದ ನೀರು ಹೊರಹಾಕದೇ ನಿರ್ಲಕ್ಷ್ಯ- ಇದು ಹೆಚ್‍ಡಿಕೆ ಸ್ವಕ್ಷೇತ್ರದ ದುಸ್ಥಿತಿ

Advertisements

ರಾಮನಗರ: ಪ್ರವಾಹ (Flood) ಕಳೆದು ತಿಂಗಳಾದರೂ ಶಾಲಾ ಆವರಣದ ನೀರು ಹೊರಹಾಕದೇ ನಿರ್ಲಕ್ಷ್ಯ ವಹಿಸಲಾಗಿದ್ದು, ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.

Advertisements

ಮಾಜಿ ಸಿಎಂ ಕುಮಾರಸ್ವಾಮಿ (H D Kumaraswamy) ಸ್ವಕ್ಷೇತ್ರದಲ್ಲೇ ಶಾಲೆಯ ದುಸ್ಥಿತಿ ಇದಾಗಿದೆ. ಚನ್ನಪಟ್ಟಣದ ತಟ್ಟೆಕೆರೆ ಸರ್ಕಾರಿ ಶಾಲೆಯಲ್ಲಿ ಮಳೆ (Rain) ನೀರು ನಿಂತು ಅವಾಂತರ ಸೃಷ್ಟಿಯಾಗಿದ್ದು, ಶಿಕ್ಷಣ ಇಲಾಖೆ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಬೆದರಿಕೆ ಪ್ರಕರಣ – ಮೂವರು ಕಾಂಗ್ರೆಸ್ ಕಾರ್ಯಕರ್ತರು ಅಮಾನತು

Advertisements

1 ರಿಂದ 7ನೇ ತರಗತಿವರೆಗೆ 64 ಮಕ್ಕಳು ಓದುತ್ತಿದ್ದಾರೆ. ಶಾಲಾ ಆವರಣದಲ್ಲಿ ನೀರು ತುಂಬಿಕೊಂಡು ತಿಂಗಳು ಕಳೆದರೂ ಅಧಿಕಾರಿಗಳು ಮಾತ್ರ ನೀರು ಹೊರಹಾಕಿಲ್ಲ. ಹೀಗಾಗಿ ಒಂದು ತಿಂಗಳಿಂದಲೂ ತಟ್ಟೆಕೆರೆ ಬೀರೇಶ್ವರ ದೇವಾಲಯದ ಬಳಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲಾಗುತ್ತಿದೆ.

Live Tv

Advertisements