ಮುಂಬೈ: ಬಾಲಿವುಡ್ ಯಂಗ್ ಭಾಯಿಜಾನ್ ಸಲ್ಮಾನ್ ಖಾನ್ ರೇಸ್-3 ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಎಲ್ಲ ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ರೇಸ್ ಮತ್ತು ರೇಸ್-2 ಸಿನಿಮಾಗಳಲ್ಲಿ ನಟರು ಮತ್ತು ನಟಿಯರು ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರಿಗೆ ಕಿಕ್ ಕೊಟ್ಟಿದ್ದರು. ಆದರೆ ಸಲ್ಮಾನ್ ಮುಂದುವರಿದ ಭಾಗದಲ್ಲಿ ನಟಿಸುತ್ತಿರುವದರಿಂದ ಅವರು ಕೂಡ ಸಿಕ್ಸ್ ಪ್ಯಾಕ್ ಮತ್ತು ಕಿಸ್ಸಿಂಗ್ ಸೀನ್ ಗಳಲ್ಲಿ ಕಾಣುತ್ತಾರೆ ಎಂಬ ಪ್ರಶ್ನೆ ಎಲ್ಲ ಅಭಿಮಾನಿಗಳಲ್ಲಿ ಹುಟ್ಟುಕೊಂಡಿತ್ತು. ಸದ್ಯ ಖುದ್ದು ಸಲ್ಮಾನ್ ನಾನು ರೇಸ್-3ರಲ್ಲಿ ಕಿಸ್ಸಿಂಗ್ ಸೀನ್ ಮಾಡಲ್ಲ ಎಂದು ಉತ್ತರ ನೀಡಿದ್ದಾರೆ.
Advertisement
ಈ ಕಾರಣಕ್ಕೆ ಕಿಸ್ ಮಾಡಲ್ಲ: ಈ ಹಿಂದೆ ತೆರೆಕಂಡು ಬಾಕ್ಸ್ ಆಫೀಸ್ ಧೂಳೆಬ್ಬೆಸಿರುವ ರೇಸ್ ಸಿನಿಮಾಗಳು ವಯಸ್ಕರ ಚಿತ್ರಗಳಾಗಿದ್ದವು. ಆ ಎರಡು ಸಿನಿಮಾದಲ್ಲಿ ನಾಯಕ ನಟ ತನ್ನ ಸ್ವಾರ್ಥಕ್ಕಾಗಿ, ಹಣಕ್ಕಾಗಿ ಯಾವುದೇ ಕೆಲಸವನ್ನು ಮಾಡಲು ಹಿಂಜರಿಯುವುದಿಲ್ಲ. ಈ ವಿಷಯಗಳು ನನಗೆ ವೈಯಕ್ತಿಕವಾಗಿ ನೋವು ತಂದಿದ್ದು, ರೇಸ್-3 ಸಿನಿಮಾವನ್ನು ಪೋಷಕರು ತಮ್ಮ ಮಕ್ಕಳೊಂದಿಗೆ ಬಂದು ನೋಡುವಂತೆ ಮಾಡಲು ಕಿಸ್ಸಿಂಗ್ ಸೀನ್ ಮತ್ತು ಸೆಕ್ಸಿ ಲುಕ್ ನಲ್ಲಿ ನಟಿಸಲ್ಲ ಎಂದು ಸಲ್ಮಾನ್ ತಿಳಿಸಿದ್ದಾರೆ.
Advertisement
ಸಲ್ಮಾನ್ ತಮ್ಮ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್ ಇರಬಾರದು ಎಂಬ ಕಂಡೀಷನ್ ಹಾಕಿಕೊಂಡಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ನಟನೆಯ ಬ್ಲಾಕ್ ಬಾಸ್ಟರ್ ಚಿತ್ರಗಳಲ್ಲಿ ಲಿಪ್ ಟು ಲಿಪ್ ಕಿಸ್ಸಿಂಗ್ ಸೀನ್‍ಗಳಿಲ್ಲ. ಡಿಸೆಂಬರ್ ನಲ್ಲಿ ತೆರೆಕಾಣಲು ರೆಡಿಯಾಗಿರುವ `ಟೈಗರ್ ಜಿಂದಾ ಹೈ’ ಸಿನಿಮಾದಲ್ಲಿಯೂ ಯಾವುದೇ ಕಿಸ್ಸಿಂಗ್ ಸೀನ್ ಗಳಿಲ್ಲ.
Advertisement
Advertisement
2008ರಲ್ಲಿ ತೆರೆಕಂಡ ರೇಸ್ ಮೊದಲ ಚಿತ್ರದಲ್ಲಿ ಸೈಫ್ ಅಲಿ ಖಾನ್, ಅಕ್ಷಯ್ ಖನ್ನಾ, ಬಿಪಾಶಾ ಬಸು ಮತ್ತು ಕತ್ರೀನಾ ಬೋಲ್ಡ್ ಆಗಿ ನಟಿಸಿದ್ದರು. ಇನ್ನೂ 2013ರಲ್ಲಿ ರೇಸ್-2ನಲ್ಲಿಯೂ ಸೈಫ್ ಅಲಿ ಖಾನ್, ಜಾನ್ ಅಬ್ರಾಹಂ, ದೀಪಿಕಾ ಪಡುಕೋಣೆ ಮತ್ತು ಜಾಕ್ವೇಲಿನ್ ಫರ್ನಾಂಡೀಸ್ ನಾವೇನೂ ಕಡಿಮೆ ಇಲ್ಲ ಎಂಬಂತೆ ಸೆಕ್ಸಿ ಲುಕ್ ನಲ್ಲಿ ಮಿಂಚಿದ್ದರು. ಈಗ ರೇಸ್-3 ಸಿನಿಮಾ ಸಲ್ಮಾನ್ ಖಾನ್, ಜಾಕ್ವೇಲಿನ್ ಫರ್ನಾಂಡೀಸ್, ಬಾಬಿ ಡಿಯೋಲ್, ಡೈಸಿ ಶಾ, ಪೂಜಾ ಹೆಗಡೆ, ಸಖೀಬ್ ಸಲೀಂ ಸೇರಿದಂತೆ ದೊಡ್ಡ ತಾರಾಗಣವನ್ನು ಹೊಂದಿದೆ. ಸಿನಿಮಾಗೆ ರೆಮೋ ಡಿಸೋಜಾ ಆ್ಯಕ್ಷನ್ ಕಟ್ ಹೇಳುತ್ತಿದ್ದು, ರಮೇಶ್ ತೌರಾಣಿ ಮತ್ತುಮ ಸಲ್ಮಾನ್ ಖಾನ್ ಇಬ್ಬರೂ ಜಂಟಿಯಾಗಿ ಬಂಡವಾಳ ಹಾಕಿದ್ದಾರೆ.