ಮುಂಬೈ: 2019ರ ವಿಶ್ವಕಪ್ (ICC WorldCup) ಟೂರ್ನಿಯ ನಂತರ ನನ್ನ ಮತ್ತು ಬಾಬರ್ ಆಜಂ ನಡುವೆ ಮೊದಲ ಸಂವಾದ ನಡೆದಿತ್ತು. ಅಂದು ಇಬ್ಬರು ಸಾಕಷ್ಟು ವಿಚಾರಗಳನ್ನ ಚರ್ಚೆ ಮಾಡಿದ್ವಿ. ಆದ್ರೆ ಬಾಬರ್ ಆಜಂ (Babar Azam) ಮೇಲಿನ ಗೌರವ ಇಂದಿಗೂ ಬದಲಾಗಿಲ್ಲ ಎಂದು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಕೊಹ್ಲಿ, ಪಾಕ್ ತಂಡದ (Pakistan Team) ನಾಯಕ ಬಾಬರ್ ಆಜಂ ಹಾಗೂ ತಮ್ಮ ನಡುವಿನ ಸಂಬಂಧದ ಕುರಿತು ಹೇಳಿದ್ದಾರೆ. ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ವಾಸಿಂ ಪರಿಚಯವಾಗಿದ್ದರು. 2019ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿ ಬಳಿಕ ಬಾಬರ್ ನನ್ನೊಂದಿಗೆ ಮಾತನಾಡಲು ಬಯಸಿದ್ದರು. ಇಬ್ಬರೂ ಕುಳಿತು ಕ್ರಿಕೆಟ್‌ನ (Cricket) ವಿವಿಧ ಆಯಾಮಗಳ ಬಗ್ಗೆ ಸುಧೀರ್ಘವಾಗಿ ಮಾತನಾಡಿದ್ದೆವು. ನಾನು ಬಾಬರ್‌ನನ್ನ ಅತೀ ಗೌರವದಿಂದ ಕಾಣುತ್ತಿದೆ. ಇಂದಿಗೂ ಆ ಗೌರವ ಬದಲಾಗಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಬಾಬರ್ ಆಜಂ ಎಲ್ಲಾ ಸ್ವರೂಪದಲ್ಲಿಯೂ ವಿಶ್ವದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಆಗಿದ್ದಾರೆ. ಆದ್ದರಿಂದ ಸ್ಥಿರವಾಗಿ ಆಡುತ್ತಾರೆ. ನಾನೂ ಸಹ ಅವರ ಆಟವನ್ನ ತುಂಬಾ ಎಂಜಾಯ್ ಮಾಡ್ತೀನಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Asian Championship Trophy Hockey final: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ; ಮಲೇಷ್ಯಾ ವಿರುದ್ಧ 4-3 ಅಂತರದ ರೋಚಕ ಜಯ
Advertisement
28 ವರ್ಷದ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ 104 T20, 100 ಏಕದಿನ ಮತ್ತು 49 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 30 ಶತಕಗಳೂ ಸೇರಿದಂತೆ 12,346 ರನ್ ಗಳಿಸಿದ್ದಾರೆ. ಮೂರು ಆವೃತ್ತಿಯಲ್ಲೂ ಸ್ಟಾರ್ ಬ್ಯಾಟ್ಸ್‌ಮ್ಯಾನ್ ಆಗಿದ್ದಾರೆ.
Advertisement
ವಿರಾಟ್ ಕೊಹ್ಲಿ 111 ಟೆಸ್ಟ್ ಪಂದ್ಯಗಳಲ್ಲಿ 29 ಶತಕ, 29 ಅರ್ಧಶತಕಗಳೊಂದಿಗೆ 8,676 ರನ್, 275 ಏಕದಿನ ಪಂದ್ಯಗಳಲ್ಲಿ 46 ಶತಕ ಮತ್ತು 65 ಅರ್ಧಶತಕ ಗಳೊಂದಿಗೆ 12,898 ರನ್ ಮತ್ತು 115 ಟಿ20 ಪಂದ್ಯಗಳಲ್ಲಿ 1 ಶತಕ, 37 ಅರ್ಧಶತಕ ಗಳಿಸಿದ್ದಾರೆ. ಒಟ್ಟಾರೆಯಾಗಿ 76 ಅಂತಾರಾಷ್ಟ್ರೀಯ ಶತಕಗಳೊಂದಿಗೆ 25 ಸಾವಿರ ರನ್ ಪೂರೈಸಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಎನಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ 100 ಶತಕ ಬಾರಿಸಿ 34,357 ರನ್ ಗಳಿಸಿ ಅಗ್ರಸ್ಥಾನದಲ್ಲಿರುವ ಲೆಂಜೆಂಡ್ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯುತ್ತಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಇದೇ ಆಗಸ್ಟ್ 30 ರಿಂದ ಸೆಪ್ಟೆಂಬರ್ 17ರ ವರೆಗೆ ಏಕದಿನ ಏಷ್ಯಾಕಪ್ ಹಾಗೂ ಅಕ್ಟೋಬರ್ 05 ರಿಂದ ನವೆಂಬರ್ 19ರ ವರೆಗೆ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಭಾರತ ಮತ್ತು ಪಾಕ್ ತಂಡಗಳು ಮುಖಾಮುಖಿಯಾಗಲಿವೆ. ಇದನ್ನೂ ಓದಿ: ಭಾರತಕ್ಕೆ 9 ವಿಕೆಟ್‌ಗಳ ಯಶಸ್ವಿ ಜಯ ತಂದ ಗಿಲ್, ಜೈಸ್ವಾಲ್ – ಇಂದು ರೋಚಕ ಹಣಾಹಣಿ
Web Stories