ಚಾಮರಾಜನಗರ: ಮಂಡ್ಯದ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿದ್ದು, ಆ ಜಾಗ ಅರಮನೆ ಮಂಡಳಿಗೆ ಸೇರಿದ್ದಾಗಿದೆ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
Advertisement
ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾಖಲೆ ನೋಡುವಾಗ ಆ ಜಾಗ ಅರಮನೆಗೆ ಸೇರಿದ್ದು ಎಂದು ಗೊತ್ತಾಗಿದೆ. ಕೆಆರ್‌ಎಸ್ ಸಂರಕ್ಷಣೆ ಮಾಡುವುದು ನಮ್ಮ ಹಾಗೂ ಜನರ ಆಶಯವೂ ಆಗಿದೆ. ಸಂರಕ್ಷಣಾ ದೃಷ್ಟಿಯಿಂದ ನೋಡಿಕೊಂಡು ಕೆಲಸ ಮಾಡಬೇಕು. ಇದು ನನ್ನ ವೈಯಕ್ತಿಕ ಸಲಹೆ ಎಂದು ನೀಡಿದ್ದಾರೆ. ಇದನ್ನೂ ಓದಿ: KRS ಸುತ್ತಮುತ್ತ ಟ್ರಯಲ್ ಬ್ಲಾಸ್ಟ್ ಆಕ್ಷೇಪಿಸಿ ರಾಜಮನೆತನ ಪತ್ರ
Advertisement
Advertisement
ಟ್ರಯಲ್ ಬ್ಲಾಸ್ಟ್ ವಿಚಾರವನ್ನು ನೇರವಾಗಿ ಅರಮನೆ ಆಡಳಿತ ಮಂಡಳಿಗೆ ಕೇಳಬೇಕು. ಅರಮನೆ ಕಚೇರಿ ಈ ಬಗ್ಗೆ ಉತ್ತರ ನೀಡುತ್ತದೆ ಎಂದಿದ್ದಾರೆ. ಇದನ್ನೂ ಓದಿ: KRSಗೆ ಕಂಟಕದ ಆತಂಕ – ರೈತರ ಧರಣಿಗೆ ಮಣಿದು ಟ್ರಯಲ್ ಬ್ಲಾಸ್ಟ್‌ಗೆ ತಾತ್ಕಾಲಿಕ ತಡೆ
Advertisement
ಪ್ರಧಾನಿ ನರೇಂದ್ರ ಮೋದಿ ಮೈಸೂರು ಅರಮನೆಗೆ ಭೇಟಿ ನೀಡಿದ್ದ ವಿಚಾರವಾಗಿ ಮಾತನಾಡಿದ ಅವರು, ಮೋದಿ ಭೇಟಿ ನೀಡಿದ್ದು ಕೇವಲ ಔಪಚಾರಿಕ ಅಷ್ಟೇ. ನಮ್ಮ ಮಧ್ಯೆ ರಾಜಕೀಯ ಚರ್ಚೆ ನಡೆದಿಲ್ಲ. ಸದ್ಯ ನಾನು ಚುನಾವಣೆಗೆ ಸ್ಪರ್ಧಿಸುವ ವಿಚಾರವೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.