ಬಿಗ್ ಬಾಸ್ ಓಟಿಟಿ (Bigg Boss OTT) ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರ ಖಾಸಗಿ ವಿಡಿಯೋ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಯಿತು. ಅವರು ಬಿಗ್ ಬಾಸ್ ಮನೆಗೆ ಹೋದಾಗ ಆ ಕುರಿತು ಬಹಿರಂಗವಾಗಿಯೇ ಹೇಳಿಕೊಂಡರು. ಅಲ್ಲದೇ, ಆ ಹುಡುಗನ ಬಳಿ ಮತ್ತೊಂದು ವಿಡಿಯೋ ಇರುವುದಾಗಿಯೂ ತಿಳಿಸಿದ್ದರು. ಈ ವಿಷಯ ಕೇಳಿದ ಬಿಗ್ ಬಾಸ್ ಮನೆಯೇ ಶಾಕ್ ಗೆ ಒಳಗಾಗಿತ್ತು. ಈ ಕುರಿತು ಸೋನು ಮತ್ತೆ ಮಾತನಾಡಿದ್ದಾರೆ.
Advertisement
ಖಾಸಗಿ ಸಂಗತಿಗಳು ಅಂದರೆ, ಇಬ್ಬರಲ್ಲೇ ಇರಬೇಕಾದದ್ದು. ಆದರೆ, ಆ ಹುಡುಗ ನಂಬಿಕೆ ದ್ರೋಹ ಮಾಡಿದ್ದಾನೆ ಎನ್ನುತ್ತಾರೆ ಸೋನು. ‘ನಾನು ಆ ಹುಡುಗನನ್ನು ನಂಬಿದ್ದೆ. ತುಂಬಾ ಇಷ್ಟ ಪಡುತ್ತಿದ್ದೆ. ಆದರೆ, ಅವನು ಆ ರೀತಿ ನಡೆದುಕೊಳ್ಳುತ್ತಾನೆ ಅಂತ ಅಂದುಕೊಂಡಿರಲಿಲ್ಲ. ಮೊದಲು ಆ ವಿಡಿಯೋವನ್ನು ಮಾಡಿಕೊಂಡಿದ್ದು ತಪ್ಪು. ಎರಡನೆಯದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು ತಪ್ಪು. ಅದರಿಂದಾಗಿ ನನ್ನ ಮರ್ಯಾದೆ ಹೋಯಿತು ಅನ್ನುತ್ತಾರೆ.
Advertisement
Advertisement
ಆ ವಿಡಿಯೋವನ್ನು (Private Video) ಅವನು ಹಾಕಿದ್ದಾನೋ ಅಥವಾ ಬೇರೆ ಯಾರಾದರೂ ಹಾಕಿದ್ದಾರೋ ಅದು ಬೇರೆ ವಿಚಾರ. ಆದರೆ, ಆ ಹುಡುಗ ವಿಡಿಯೋವನ್ನು ಶೂಟ್ ಮಾಡಿದ ಮೇಲೆ ಅಲ್ಲವೆ ಅಷ್ಟೊಂದು ಆಗಿದ್ದು? ಈ ರೀತಿ ಯಾವ ಹುಡುಗಿಗೂ ಮೋಸ ಆಗಬಾರದು. ಆ ಕಾರಣಕ್ಕಾಗಿಯೇ ನಾನು ಬಹಿರಂಗವಾಗಿಯೇ ಅದನ್ನು ಹೇಳಿದೆ. ಇಂತಹ ತಪ್ಪು ನಡೆಯಬಾರದು ಎನ್ನುವ ಕಾರಣಕ್ಕಾಗಿಯೇ ಎರಡನೇ ವಿಡಿಯೋ ಬಗ್ಗೆಯೂ ನಾನು ಮಾತನಾಡಿದೆ. ಇದನ್ನೂ ಓದಿ:`ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ
Advertisement
ಬಿಗ್ ಬಾಸ್ ಮನೆಯಲ್ಲಿ ಸಿಂಪತಿಗಾಗಿ ಇದನ್ನೆಲ್ಲ ಹೇಳಲಿಲ್ಲ ಎನ್ನುವ ಸೋನು, ಇಂತಹ ವಿಚಾರವನ್ನು ಹೇಳಿಕೊಂಡರೆ ನಮಗೆ ತಾನೆ ಕಷ್ಟ ಆಗೋದು. ಆದರೂ, ನಾನು ಹೇಳಿದೆ. ಕಾರಣ, ಮೋಸ (Cheat) ಹೇಗೆ ನಡೆಯುತ್ತದೆ ಎಂದು ತಿಳಿಸಲು. ಆ ಹುಡುಗ ಅಂತಲ್ಲ, ಯಾರೂ ಈ ಕೆಲಸವನ್ನು ಮಾಡಬಾರದು. ಒಂದೇ ಒಂದು ಸಲ ತಮ್ಮ ಮನೆಯ ಹೆಣ್ಣು ಮಕ್ಕಳನ್ನೂ ನೆನಪಿಸಿಕೊಳ್ಳಬೇಕು ಎನ್ನುವುದು ಸೋನು ಮಾತು.