ಕಾಲಿವುಡ್ ಯುವ ನಟಿ ದೀಪಾ (Deepa) ನಿನ್ನೆಯಷ್ಟೇ ಅವರ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ರೂಮ್ ನಲ್ಲೇ ಸಿಕ್ಕ ಡೆತ್ ನೋಟ್ ನಲ್ಲಿ ತಮ್ಮ ಪ್ರೀತಿ ಪ್ರೇಮದ ಬಗ್ಗೆ ಸವಿವರವಾಗಿ ಬರೆದುಕೊಂಡಿದ್ದಾರೆ. ಸದಾ ನಿನ್ನ ಪ್ರೀತಿಸುತ್ತಲೇ ಇರುತ್ತೇನೆ ಎಂದು ಪತ್ರವನ್ನು ಮುಗಿಸಿದ್ದಾರೆ. ಆದರೆ, ಅವರು ಯಾರನ್ನು ಪ್ರೀತಿಸುತ್ತಿದ್ದರು? ಆ ಹುಡುಗ ಯಾರು? ಇವರಿಬ್ಬರ ಮಧ್ಯೆ ಏನಾಯಿತು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಆ ಹುಡುಗ ಯಾರು ಎನ್ನುವುದನ್ನು ಅವರು ಕೂಡ ಡೆತ್ ನೋಟ್ ನಲ್ಲಿ ಬರೆದಿಲ್ಲ. ಹಾಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ.
ಯುವ ನಟಿ ದೀಪಾ ಆತ್ಮಹತ್ಯೆಯಿಂದಾಗಿ ಕಾಲಿವುಡ್ ಆಘಾತಗೊಂಡಿದೆ. ಇತ್ತೀಚೆಗಷ್ಟೇ ತೆರೆಕಂಡ ‘ವೈಧಾ’ (Vaidha) ಚಿತ್ರದಲ್ಲಿ ನಟಿಸಿದ್ದ ಇವರು, ಚೆನ್ನೈನ ವಿರುಗಂಬಕ್ಕಮ್ ನಲ್ಲಿರುವ ತಮ್ಮ ರೂಮ್ ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ. ಹಾಗಾಗಿ ಇದೊಂದು ಆತ್ಮಹತ್ಯೆ ಎಂದು ಪೊಲೀಸ್ ನವರು ಶಂಕಿಸಿದ್ದಾರೆ. ಪೌಲಿನ್ ಜೆಸ್ಸಿಕಾ (Pauline Jessica) ಇವರ ಮೂಲ ಹೆಸರು. ದೀಪಾ ಹೆಸರಿನ ಮೂಲಕ ಫೇಮಸ್ ಆಗಿದ್ದರು. ವೈಧಾ, ತುಪ್ಪರಿವಾಲನ್ (Thupparivalan) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂಲಗಳ ಪ್ರಕಾರ ದೀಪಾ ಲವ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಪ್ರೀತಿಯಲ್ಲಿ ಎದುರಾದ ತೊಡಕುಗಳನ್ನು ಬಿಡಿಸಿಕೊಳ್ಳಲಾಗಿದೆ ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬೇಬಿ ಬಂಪ್ ಲುಕ್‌ನಲ್ಲಿ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟ ಬಿಪಾಶಾ ಬಸು
ದೀಪಾ ಅವರ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶವಪರೀಕ್ಷೆಗಾಗಿ ಕಳುಹಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ಪ್ರೀತಿ, ಪ್ರೇಮದ ವಿಚಾರವಾಗಿಯೇ ಈ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಖ್ಯಾತ ಗೀತರಚನೆಕಾರರ ಮಗಳೊಬ್ಬಳು ಇಂಥದ್ದೇ ಪ್ರೇಮಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ.