ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ (Tharun Sudhir) ಮತ್ತು ನಟಿ ಸೋನಲ್ (Sonal) ಮದುವೆ ವಿಚಾರ ಕೆಲದಿನಗಳಿಂದ ಚರ್ಚೆಗೆ ಗ್ರಾಸವಾಗಿದೆ. ಆದರೆ ಮದುವೆ ಯಾವಾಗ? ಯಾರ ಜೊತೆ ಎಂಬುದು ತರುಣ್ ನೇರವಾಗಿ ಮಾತನಾಡಿರಲಿಲ್ಲ. ಈಗ ಜೀವನದ ರಿಯಲ್ ಹೀರೋಯಿನ್ ಬಗ್ಗೆ ‘ಕಾಟೇರ’ ನಿರ್ದೇಶಕ ತರುಣ್ ಘೋಷಣೆ ಮಾಡೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಅದೆಷ್ಟೋ ಜನರಿಗೆ ವಿನೋದ್ ಬದುಕಿನ ದಾರಿ ಹೇಳಿ ಕೊಟ್ಟಿದ್ದಾರೆ: ನಟಿ ಲಕ್ಷ್ಮಿ ಸಿದ್ದಯ್ಯ
ದರ್ಶನ್‌ರನ್ನು ತರುಣ್ ಜೈಲಿನಲ್ಲಿ ಭೇಟಿಯಾದ ಬೆನ್ನಲ್ಲೇ ಮದುವೆ (Wedding) ಬಗ್ಗೆ ಗುಡ್ ನ್ಯೂಸ್ ಕೊಡಲು ಸಜ್ಜಾಗಿದ್ದಾರೆ. ಮದುವೆ ಹಾಗೂ ತನ್ನ ಬದುಕಿನ ಹೀರೋಯಿನ್ ಕುರಿತು ನಾಳೆ (ಜು.22) ಬೆಳಗ್ಗೆ 11:08ಕ್ಕೆ ಮಾಹಿತಿ ನೀಡುವುದಾಗಿ ನಿರ್ದೇಶಕ ತರುಣ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
View this post on Instagram
ಈವರೆಗೂ ವದಂತಿ ಬಿಟ್ಟರೇ ತರುಣ್ ಆಗಲಿ, ಸೋನಲ್ ಆಗಲಿ ಪ್ರೀತಿ ಅಥವಾ ಮದುವೆ ಕುರಿತು ಮಾತಾಡಿರಲಿಲ್ಲ. ಜು.22ರಂದು ವಿಶೇಷ ವಿಡಿಯೋವೊಂದನ್ನ ಪೋಸ್ಟ್ ಮಾಡಿ ಸೋನಲ್ ಜೊತೆಗಿನ ಮದುವೆ ವದಂತಿಗೆ ತೆರೆ ಎಳೆಯಲಿದ್ದಾರೆ ‘ರಾಬರ್ಟ್’ ನಿರ್ದೇಶಕ ತರುಣ್. ಸೋನಲ್ ಮತ್ತು ತರುಣ್ ಒಂದೇ ರೀತಿಯ ಪೋಸ್ಟ್ ಶೇರ್ ಮಾಡಿರೋದು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.
ಅಂದಹಾಗೆ, ‘ರಾಬರ್ಟ್’ ಸಿನಿಮಾ ಸೆಟ್‌ನಲ್ಲಿ ಸೋನಲ್ ಜೊತೆಗಿನ ಪರಿಚಯವೇ ಇಂದು ಮದುವೆಗೆ ಮುನ್ನಡಿ ಬರೆದಿದೆ. ಇಬ್ಬರ ಮದುವೆಗೆ ಮುನ್ನುಡಿ ಬರೆದಿದ್ದೇ ದರ್ಶನ್. ಇದೀಗ ಇದೇ ಆಗಸ್ಟ್ 10, 11ರಂದು ಹೊಸ ಬಾಳಿಗೆ ಸೋನಲ್ ಮತ್ತು ತರುಣ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಕುರಿತು ನಾಳೆ ಅಧಿಕೃತ ಘೋಷಣೆ ಆಗಲಿದೆ.