ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ಸಂಬಂಧ ಜಾಮೀನು ಸಿಕ್ಕ ಬೆನ್ನಲ್ಲೇ ‘ಕಾಟೇರ’ ಡೈರೆಕ್ಟರ್ ತರುಣ್ ಸುಧೀರ್ (Tharun Sudhir) ರಿಯಾಕ್ಟ್ ಮಾಡಿದ್ದಾರೆ. ದರ್ಶನ್‌ಗೆ ಬೇಲ್ ಸಿಕ್ಕಿರೋದು ತುಂಬಾ ಖುಷಿ ಇದೆ ಎಂದು ನಿರ್ದೇಶಕ ಮಾತನಾಡಿದ್ದಾರೆ.
Advertisement
ತುಂಬಾ ಖುಷಿ ಇದೆ ಹನುಮ ಜಯಂತಿ ದಿನ ದರ್ಶನ್ ಅವರಿಗೆ ಬೇಲ್ ಸಿಕ್ಕಿದೆ. ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ ಟ್ರೀಟ್‌ಮೆಂಟ್ ಕೂಡ ನಡೆಯುತ್ತಿದೆ. ನಮಗೆ ಅವರ ಆರೋಗ್ಯ ಮುಖ್ಯ, ಮೊದಲು ಚೇತರಿಸಿಕೊಂಡು ಬರಲಿ ಎಂದಿದ್ದಾರೆ. ಈ ಪ್ರಕರಣದಿಂದ ಆರೋಪಮುಕ್ತರಾಗಿ ಹೊರಬಂದರೆ ನಮ್ಮಷ್ಟು ಖುಷಿ ಯಾರಿಗೂ ಇಲ್ಲ. ಇದನ್ನೂ ಓದಿ:ರೇವಂತ್ ರೆಡ್ಡಿ ಹೆಸರು ಹೇಳದ್ದಕ್ಕೆ ಬಂಧನ – ಸಿಎಂ ವಿರುದ್ಧ ಸಿಡಿದ ಅಲ್ಲು ಅಭಿಮಾನಿಗಳು
Advertisement
Advertisement
ದರ್ಶನ್‌ಗೆ ದೊಡ್ಡ ಫ್ಯಾನ್ ಬೇಸ್ ಇದೆ. ಅವರಿಗೆ ಬೇಲ್ ಸಿಕ್ಕಿರೋದು ಎಲ್ಲರಿಗೂ ಖುಷಿ ಇದೆ. ದರ್ಶನ್ ಜೈಲಿನಿಂದ ಹೊರಗೆ ಬರಲಿ ಅಂತ ಫ್ಯಾನ್ಸ್ ಹರಕೆ ಹೊತ್ತಿದ್ದರು. ನಾನು ಹರಕೆ ಹೊತ್ತಿರೋದನ್ನು ಹೇಳಿಕೊಳ್ಳಬಾರದು. ರೇಣುಕಾಸ್ವಾಮಿ ತಂದೆಯ ಪರಿಸ್ಥಿತಿ ಬಗ್ಗೆ ನಾನೇನು ಹೇಳೋದಕ್ಕೆ ಆಗಲ್ಲ. ಈ ಸಮಯದಲ್ಲಿ ದರ್ಶನ್ ನನ್ನ ನೋಡಿದ್ರೆ ಖುಷಿಪಡುತ್ತಾರೆ.
Advertisement
ಇನ್ನೂ ಕನ್ನಡ ಚಿತ್ರರಂಗದಲ್ಲಿ 200ರಿಂದ 300 ಕೋಟಿ ರೂ. ವಹಿವಾಟು ನಡೆಸುವ ನಾಯಕ ನಟ ದರ್ಶನ್. ಚಿತ್ರರಂಗಕ್ಕೆ ಅವರ ಬಿಡುಗಡೆಯಿಂದ ಒಳ್ಳೆಯದಾಗುತ್ತದೆ. ಇನ್ನೂ ‘ಡೆವಿಲ್’ (Devil) ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಅದಷ್ಟು ಬೇಗ ಬಂದೇ ಬರುತ್ತದೆ. ಈಗ ಆಡಚಣೆ ಬಂದಿದೆ. ಶೀಘ್ರದಲ್ಲಿ ಸಿನಿಮಾ ಕೂಡ ಬರುತ್ತದೆ ಎಂದಿದ್ದಾರೆ.