ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಜೈಲು ಪಾಲಾಗಿರುವ ದರ್ಶನ್‌ರನ್ನು (Darshan) ಇದೀಗ ಕಾಟೇರ ನಿರ್ದೇಶಕ ತರುಣ್ ಸುಧೀರ್ (Tharun Sudhir) ಮತ್ತು ಶಾಸಕ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಭೇಟಿಯಾಗಿದ್ದಾರೆ.
ಮರ್ಡರ್ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್‌ರನ್ನು ನೋಡಲು ಒಬ್ಬೊಬ್ಬರೇ ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಡುತ್ತಿದ್ದಾರೆ. ಈಗ ಪ್ರತ್ಯೇಕ ಕಾರಿನಲ್ಲಿ ಜೈಲಿನ ಚೆಕ್ ಪೋಸ್ಟ್ ಒಳಗೆ ತರುಣ್ ಸುಧೀರ್ ಮತ್ತು ದರ್ಶನ್ ಪುಟ್ಟಣ್ಣಯ್ಯ ಆಗಮಿಸಿದ್ದಾರೆ. ಜೈಲಿನ ಪ್ರತ್ಯೇಕ ಕೊಠಡಿಯಲ್ಲಿ ದರ್ಶನ್‌ರನ್ನು ಭೇಟಿಯಾಗಿದ್ದಾರೆ.
ಸೋನಲ್ (Sonal) ಜೊತೆಗಿನ ಮದುವೆ ಸಂಗತಿ ನಿಜ ಎಂದು ಒಪ್ಪಿಕೊಂಡ ಬೆನ್ನಲ್ಲೇ ದರ್ಶನ್ ಕ್ಷೇಮ ವಿಚಾರಿಸಲು ಮತ್ತು ವಿವಾಹದ ವಿಚಾರ ತಿಳಿಸಲು ತರುಣ್ ಸುಧೀರ್ ಈಗ ದರ್ಶನ್ ಭೇಟಿಯಾಗಿದ್ರೆ, ಇತ್ತ ದರ್ಶನ್ ಪುಟ್ಟಣ್ಣಯ್ಯ ಕೂಡ ನಟನನ್ನು ಮಾತನಾಡಿಸಲು ಬಂದಿದ್ದಾರೆ.
ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ. ಅದರಂತೆ ಈ ವಾರ ಈಗಾಗಲೇ ಅತ್ತಿಗೆ ವಿಜಯಲಕ್ಷ್ಮಿ ಜೊತೆ ದಿನಕರ್ ತೂಗುದೀಪ್ ಭೇಟಿಯಾಗಿದ್ದರು.